ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಮತದಾರ ಪಟ್ಟಿಯಲ್ಲಿರುವ ಮತದಾರರಿಂದ ದಾಖಲಾತಿಯನ್ನು ಪ್ರಕ್ರಿಯೆ ನಡೆಯುತ್ತಿದೆ. “ಸ್ಪೆಶಲ್ ಇಂಟೆನ್ಸಿವ್ ರಿವಿಜನ್” (ಎಸ್ ಐಆರ್) ಈ ಪ್ರಕ್ರಿಯೆಯು ರಾಜ್ಯದಲ್ಲಿ ಹೊಸತೇನಲ್ಲ. ಈ ಹಿಂದೆ ಗೋವಾ ರಾಜ್ಯದಲ್ಲಿ 13 ಬಾರಿ ಇಂತಹ ಪ್ರಕಲ್ರಿಯೆಯನ್ನು ನಡೆಸಲಾಗಿದೆ. ಇದು ಮತದಾರ ಪಟ್ಟಿಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಕೇವಲ ರಾಜಕೀಯವಾಗಿ ನೋಡದೆಯೇ ಪ್ರಜಾಪ್ರಭುತ್ವವನ್ನು ಬಲಪಡಿಸಲು ಈ ಪ್ರಕ್ರಿಯೆ ಅವಶ್ಯಕವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೋವಾ ವಿಧಾನಸಭೆಯ ಕಲಾಪದಲ್ಲಿ ಮಾಹಿತಿ ನೀಡಿದರು.
ಹಲವು ಬಾರಿ ಮತದಾರ ನೋಂದಣಿಗಾಗಿ ಆಧಾರ ಕಾರ್ಡ ಬಳಕೆ ಮಾಡಲಾಗುತ್ತದೆ. ಆಧಾರ ಕಾರ್ಡ ಇದು ಕೇವಲ ವಾಸ್ತವ್ಯದ ವಿಳಾಸದ ಮಾಹಿತಿ ನೀಡುವಂತದ್ದಾಗಿದೆ. ಆಧಾರ ಕಾರ್ಡನ್ನು ನಮ್ಮ ದೇಶದ ನಾಗರೀಕತ್ವದ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ವಿದೇಶಿ ನಾಗರೀಕರಿಗೂ ವಿಶೇಷ ಸಂದರ್ಭದಲ್ಲಿ ಆಧಾರ ಕಾರ್ಯ ನೀಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಆಧಾರ ಕಾರ್ಡ ಹೊಂದಿದ್ದಾರೆ ಎಂಬ ಮಾತ್ರಕ್ಕೆ ಇದರ ಮೂಲಕ ರಾಜ್ಯದ ಮತದಾರ ಪಟ್ಟಿಯಲ್ಲಿ ಅವರ ಹೆಸರನ್ನು ಖಾಯಂ ಆಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ವಿದೇಶಿ ನಾಗರೀಕರ ಹೆಸರು ನಮ್ಮ ಮತದಾರ ಪಟ್ಟಿಯಲ್ಲಿ ಇರಬಾರದು ಹಾಗೂ ಭಾರತೀಯ ನಾಗರೀಕರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಭಾರತೀಯ ನಾಗರೀಕತ್ವ ಸಿದ್ಧಪಡಿಸಲು ಹಾಗೂ ನಮ್ಮ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಲು 13 ರೀತಿಯ ಕಾಗದಪತ್ರಗಳನ್ನು ಒದಗಿಸಬೇಕಿದೆ. ಈ ಕಾಗದ ಪತ್ರಗಳ ಆಧಾರದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಗೋವಾದ ಭವಿಷ್ಯವನ್ನು ತಮ್ಮ ಅಮೂಲ್ಯವಾದ ಮತದಾನದ ಮೂಲಕ ನಿರ್ಧರಿಸುವ ಅಧಿಕಾರ ಕೇವಲ ಈ ದೇಶದ ಅಧೀಕೃತ ನಾಗರೀಕರಿಗೆ ಮಾತ್ರ ಇರಲಿದೆ. ಮೃತ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕದಿರುವುದು ಹಾಗೂ ಬೋಗಸ್ ಮತದಾರರನ್ನು ಹೊಂದಿರುವುದು ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಇರುವುದಿಲ್ಲ. ವಿರೋಧ ಪಕ್ಷು ಕೂಡ ಈ ಪ್ರಕ್ರಿಯೆಯಲ್ಲಿ ಸಹಕರಿಸಬೇಕು. ಇಷ್ಟೇ ಅಲ್ಲದೆಯೇ ಯಾವುದೇ ರೀತಿಯ ಊಹಾಪೋಹಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದರು.
