ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಇದುವರೆಗೂ ಬೈಕ್ ಸವಾರರಿಗೆ ಮಾತ್ರ ಹೆಲ್ಮೆಟ್ ಖಡ್ಡಾಯವಿತ್ತು. ಆದರೆ ಇದೀಗ ಬೈಕ್ ನಲ್ಲಿ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಖಡ್ಡಾಯಗೊಳ್ಳಲಿದೆ. ಈ ಕುರಿತಂತೆ ಗೋವಾ ವಿಧಾನಸಭೆಯಲ್ಲಿ ಭಾರಿ ಚರ್ಚೆಯಾಗಿದ್ದು, ಶೀಘ್ರದಲ್ಲಿಯೇ ಈ ಆದೇಶ ಜಾರಿಗೊಳ್ಳಲಿದೆ.
ದ್ವಿಚಕ್ರ ವಾಹನದಲ್ಲಿ ಹಿಂಬದಿಯ ಸವಾರರಿಗೂ ಕೂಡ ಗೋವಾ ರಾಜ್ಯದಲ್ಲಿ ಇದೀಗ ಹೆಲ್ಮೆಟ್ ಖಡ್ಡಾಯಗೊಳ್ಳಲಿದೆ. ಈ ಕುರಿತಂತೆ ಗೋವಾ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಹಳದೋಣ ಶಾಸಕ ಕಾರ್ಲುಸ್ ಅಲ್ಮೆದಾ ರವರು ಅಧಿವೇಶನ ಕಲಾಪದಲ್ಲಿ ಪ್ರಶ್ನೆ ಎತ್ತಿದ್ದರು. ರಸ್ತೆ ಅಪಘಾತದಲ್ಲಿ ರಾಜ್ಯದಲ್ಲಿ ಹೆಚ್ಚಿನ ಜೀವಹಾನಿಯಾಗುತ್ತಿದೆ. ಅಪಘಾತದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಆತಂಕವಿರುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನ ಅಪಘಾತದ ಸಂದರ್ಭದಲ್ಲಿ ಹಿಂಬದಿ ಸವಾರರಿಗೂ ಹೆಚ್ಚಿನ ಆತಂಕವಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಫೆರೆರಾ ರವರು ಈ ಸಂದರ್ಭದಲ್ಲಿ ಪ್ರಶ್ನಿಸಿ- ದೇಶದ ಎಲ್ಲ ರಾಜ್ಯಗಳಲ್ಲಿ ಬೈಕ್ ಹಿಂಬದು ಸವಾರರಿಗೂ ಹೆಲ್ಮೆಟ್ ಖಡಗಡಾಯವಿದೆ. ಗೋವಾದಲ್ಲಿ ಮಾತ್ರ ಕೇವಲ ಬೈಕ್ ಸವಾರರಿಗೆ ಮಾತ್ರ ಹೆಲ್ಮೆಟ್ ಖಡ್ಡಾಯವಿದೆ. ಈ ಬೇಧಭಾವ ಏಕೆ….?ಖಾಯ್ದೆಯ ಪಾಲನೆ ಸರಿಯಾಗಿ ಆಗಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತದ ಹಿನ್ನೆಲೆಯಲ್ಲಿ ಸರ್ಕಾರವು ಇತ್ತಕಡೆ ಗಂಭೀರವಾಗಿ ಲಕ್ಷ್ಯ ವಹಿಸಬೇಕು ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್- ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ಖಡ್ಡಾಯಗೊಳಿಸುವ ಕುರಿತಂತೆ ಈಗಾಗಲೇ ಸೂಚನೆ ಹೊರಡಿಸಲಾಗಿದೆ. ಶೀಘ್ರದಲ್ಲಿಯೇ ಗೋವಾದಲ್ಲಿ ಬೈಕ್ ನಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಖಡ್ಡಾಯಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
