ಸುದ್ಧಿಕನ್ನಡ ವಾರ್ತೆ
ಪಣಜಿ: ಪಣಜಿ ಮಾಂಡವಿ ನದಿಯ ಹಳೇಯ ಹಾಗೂ ಹೊಸ ಸೇತುವೆಯನ್ನು ಕೆಲ ಸಮಯದವರೆಗೆ ಜನವರಿ 11 ರಂದು ವಾಹ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಸೇತುವೆಯ ತಾಂತ್ರಿಕ ತಪಾಸಣೆಯ ಹಿನ್ನೆಲೆಯಲ್ಲಿ ಉತ್ತರಗೋವಾ ಜಿಲ್ಲಾ ದಂಡಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಸೇವೆಯ ಮೇಲೆ ಸಂಪೂರ್ಣವಾಗಿ ವಾಹನಗಳ ಓಡಾಟ ಬಂದ್ ಆಗಲಿದೆ.

ಮಾಂಡವಿ ನದಿಯ ಹಳೇಯ ಸೇತುವೆ ಹಾಗೂ ಹೊಸ ಸೇತುವೆಯ ಡೆಕ್ ಲೇವಲ್ ತಪಾಸಣೆ ಹಾಗೂ ತಾಂತ್ರಿಕ ತಪಾಸಣೆ ನಡೆಸುವ ಅಗತ್ಯವಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಈ ತಪಾಸಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಈ ತಪಾಸಣೆಯ ವೇಳೆ ಯಾವುದೇ ಅಡಚಣಿ ಉಂಟಾಗಬಾರದು ಹಾಗೂ ತಪಾಸಣೆ ಪೂರ್ಣಗೊಳ್ಳಬೇಕು ಎಂದು ತಾತ್ಪೂರ್ತಿಕವಾಗಿ ಈ ಸೇತುವೆಯ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.
ಆದೇಶದಲ್ಲಿ ತಿಳಿಸಿರುವಂತೆಯೇ ಮಾಂಡವಿ ನದಿಯ ಹಳೇಯ ಮತ್ತು ಹೊಸ ಸೇತುವೆಯನ್ನು ಎರಡು ಹಂತದಲ್ಲಿ ಬಂದ್ ಮಾಡಲಾಗುತ್ತಿದೆ. ಜನವರಿ 11 ರಂದು ಭಾನುವಾರ ಬೆಳಿಗ್ಗೆ 6 ರಿಂದ 7.30 ರವರೆಗೆ ಮಾಂಡವಿ ನದಿಯ ಹೊಸ ಸೇತುವೆಯ ತಪಾಸಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸೇತುವೆಯನ್ನು ಬಂದ್ ಮಾಡಲಾಗುತ್ತಿದೆ. ನಂತರ ಬೆಳಿಗ್ಗೆ 7.30 ರಿಂದ 9 ಗಂಟೆಯವರೆಗೆ ಮಾಂಡವಿ ನದಿಯ ಹಳೇಯ ಸೇತುವೆಯ ತಪಾಸಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹಳೇಯ ಸೇತುವೆಯ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.

ಮಾಂಡವಿ ನದಿಯ ಹೊಸ ಸೇತುವೆ ಬಂದ್ ಇರುವಾಗ ಹಳೇಯ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹಳೇಯ ಸೇತುವೆ ಬಂದ್ ಇರುವಾಗ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಮಾಹಿತಿಯನ್ನೂ ನೀಡಲಾಗಿದೆ.