ಸುದ್ಧಿಕನ್ನಡ ವಾರ್ತೆ
ಪಣಜಿ: ಮುಂಬೈ ಹೈಕೋರ್ಟನ ನಿವೃತ್ತ ನ್ಯಾಯಾಧೀಶ ಸಂದೀಪ ಶಿಂಧೆ ರವರು ಗೋವಾದ ನಾಲ್ಕನೇಯ ಲೋಕಾಯುಕ್ತರಾಗಲಿದ್ದಾರೆ. ಇದುವರೆಗಿನ ಮೂವರ ಲೋಕಾಯುಕ್ತರ ಪೈಕಿ ಇಬ್ಬರು ಲೋಕಾಯುಕ್ತರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಲೋಕಾಯುಕ್ತ ಬಿ.ಸುದರ್ಶನ ರೆಡ್ಡಿ ರವರು 6 ತಿಂಗಳ ನಂತರ ಲೋಕಾಯುಕ್ತ ಹುದ್ಧೆಗೆ ರಾಜೀನಾಮೆ ನೀಡಿದ್ದರು.
2011 ರ ಅಕ್ಟೋಬರ್ 5 ರಂದು ಗೋವಾ ಲೋಕಾಯುಕ್ತ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ರಾಷ್ಟ್ರಪತಿಗಳ ಅನುಮೋದನೆಯ ನಂತರ 12 ಮೇ 2012 ರಂದು ಈ ಕಾನೂನು ಜಾರಿಗೆ ಬಂದಿತು. 2013 ರ ಮಾರ್ಚ 1 ರಿಂದ ಲೋಕಾಯುಕ್ತ ಕಾಯ್ದೆ ಗೋವಾ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಸುಪ್ರಿಂ ಕೋರ್ಟ ನಿವೃತ್ತ ನ್ಯಾಯಾಧೀಶ ಬಿ.ಸುದರ್ಶನ ರೆಡ್ಡಿ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಿ 3 ಏಪ್ರಿಲ್ 2013 ರಿಂದ ಲೋಕಾಯುಕ್ತ ರ ಕಾರ್ಯ ಆರಂಭಗೊಂಡಿತು. ಆರು ತಿಂಗಳ ನಂತರ 19 ಏಪ್ರಿಲ್ 2013 ರಂದು ಬಿ.ಸುದರ್ಶನ ರೆಡ್ಡಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ನಂತರ ಲೋಕಾಯುಕ್ತ ಹುದ್ದೆ ಎರಡೂವರೆ ವರ್ಷಗಳ ಕಾಲ ಖಾಲಿ ಇತ್ತು. ಇದೀಗ ಮತ್ತೆ 2014 ರಲ್ಲಿ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ರವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಗೋವಾದಲ್ಲಿ ಲೋಕಾಯುಕ್ತರ ಸ್ಥಾನ ಖಾಲಿಯಿತ್ತು. ಈಗಾಗಲೇ ಗೋವಾದಲ್ಲಿ 20 ಕ್ಕೂ ಹೆಚ್ಚು ಭೃಷ್ಠಾಚಾರ ಪ್ರಕರಣಗಳು ಹಾಗೆಯೇ ಬಿದ್ದಿವೆ. ಇದೀಗ ನ್ಯಾಯಮೂರ್ತಿ ಶಿಂಧೆ ರವರು ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.
ನ್ಯಾಯಮೂರ್ತಿ ಸಂದೀಪ ಶಿಂಧೆ ರವರ ಗೋವಾ ಸಂಬಂಧ ಹಳೇಯದ್ದಾಗಿದೆ. ಅವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಸೇವೆ ಸಲ್ಲಿಸಿದ್ದರು. 2022 ರಲ್ಲಿ ಗೋವಾದಲ್ಲಿನ ಗಡಿ ಹರಾಜಿನ ನಂತರ ಒಂದು ತಿಂಗಳಲ್ಲಿ ಜಾಗ ಖಾಲಿ ಮಾಡುವಂತೆ ಅವರು ಆದೇಶ ನೀಡಿದ್ದರು. 2017 ರಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗುವ ಮುನ್ನ ಅವರು ಮುಂಬಯಿ ಮುಖ್ಯ ಸರ್ಕಾರಿ ವಕೀಲರಾಗಿಯೂ ಜವಾಬ್ದಾರಿ ನಿರ್ವಹಿಸಿದ್ಧರು.
