ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವಾಸ್ಕೊದ ಸ್ನೇಹಾ ಯಾದವ್ (24) ರವರು ಅತ್ಯಂತ ಕಠಿಣ ಸೀಮಾ ಸುರಕ್ಷಾ ದಳ (BSF ) ನ ಆಯ್ಕೆಯಾಗಿದ್ದಾರೆ. ಸಂಪೂರ್ಣ ಆಯ್ಕೆ ಪ್ರಕ್ರಿಯೆಯಲ್ಲಿ ಸೀಮಾ ಸುರಕ್ಷಾ ದಳಕ್ಕೆ ಆಯ್ಕೆಯಾಗಿರುವ ಗೋವಾದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಸದ್ಯ ಸ್ನೇಹಾ ರವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ರಕ್ಷಣಾ ಸೇವೆಯಲ್ಲಿ ನಿರತರಾಗಿದ್ದಾರೆ.

ಸ್ನೇಹಾ ಯಾದವ್ ರವರ ಈ ಹೋರಾಟ ಸುಲಭದ್ದಾಗಿರಲಿಲ್ಲ. ಸೀಮಾ ಸುರಕ್ಷಾ ದಳಕ್ಕೆ ಆಯ್ಕೆಯಾಗಬೇಕೆಂದು ಅವರು ತಮ್ಮ ಶಾರೀರಿಕ ಕ್ಷಮತೆ ಹಾಗೂ ಮನಸಿಕತೆಯನ್ನು ಬಲಪಡಿಸಿಕೊಳ್ಳಲು ಹಟದಿಂದ ಸತತ ಪ್ರಯತ್ನ ನಡೆಸಿದ್ದರು. ಇವರ ಈ ಆಯ್ಕೆಯು ವಾಸ್ಕೊ ಪರಿಸರದಲ್ಲಿ ಸಂಸತದ ವಾತಾವರಣ ಸೃಷ್ಠಿಸಿದೆ. ಒಂದು ಸಣ್ಣ ರಾಜ್ಯದಿಂದ ದೇಶದ ಗಡಿ ಸುರಕ್ಷತೆಗೆ ಆಯ್ಕೆಯಾಗಿರುವುದು ಗೋವಾ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸ್ನೇಹಾ ರವರು BSF ಗೆ ಆಯ್ಕೆಯಾಗಬೇಕೆಂದು ಅವರ ತಾಯಿ ಶೃದ್ಧಾ ರವರು ಖಾಪರೇಶ್ವರ ದೇವರಲ್ಲಿ ಹರಕೆ ಹೊತ್ತಿದ್ದರಂತೆ. ಇದೀಗ ಅವರ ಹರಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಖಾಪರೇಶ್ರ ದೇವಸ್ಥಾನದಲ್ಲಿ ಭಜನಾ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.

ಸ್ನೇಹಾ ಯಾದವ್ ರವರು ಈ ಸಾಧನೆಗೆ ವಾಸ್ಕೊದಲ್ಲಿನ ಅವರ ಸಂಬಂಧಿಕರು ಹಾಗೂ ಹಿತಚಿಂತಕರಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ಸ್ನೇಹಾ ರವರು ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವುದಕ್ಕೆ ಎಲ್ಲರಿಂದ ಅಭಿಮಾನದ ಮಾತುಗಳು ಕೇಳಿಬರುತ್ತಿದೆ. ಸ್ನೇಹ ರವರಿ ಉತ್ತಮ ಆರೋಗ್ಯ ಹಾಗೂ ದೇಶ ಸೇವೆ ಮಾಡಲು ಇನ್ನಷ್ಟು ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.