ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿರುವ ಬರ್ಚ ಬೈ ರೋಮಿಯೊ ಲೆನ್ ಕ್ಲಬ್ ನಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ್ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಅವಗಢದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರು ಇಡೀ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆಘ್ರಹಿಸಿದ್ದಾರೆ. ನವದೆಹಲಿಯ ಜಂತರ್ ಮಂತರ್ ನಲ್ಲಿ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

ಗೋವಾದ ನೈಟ್ ಕ್ಲಬ್ ದುರಂತದಲ್ಲಿ ಸಾವನ್ನಪ್ಪಿದ್ದ ಜೋಶಿ ಕುಟುಂಬಸ್ಥರು ಹಾಗೂ ಇತರ ಮೃತರ ಕುಟುಂಬಸ್ಥರು ಹಾಜರಿದ್ದರು. ದೆಹಲಿಯ ಜೋಶಿ ಕುಟುಂಬದ ನಾಲ್ವರು ಸದಸ್ಯರು ಅಗ್ನಿ ಅವಗಡದಲ್ಲಿ ಸಾವನ್ನಪ್ಪಿದ್ದರು.

ಬರ್ಚ ಬಾಯ್ ರೋಮಿಯೊ ಲೆಮ್ ನೈಟ್ ಕ್ಲಬ್ ಮಾಲೀಕರಾದ ಗೌರವ ಲೂತ್ರಾ ಹಾಗೂ ಸೌರಭ್ ಲುತ್ರಾ ರವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರೊಂದಿಗೆ ಕ್ಲಬ್ ಸಹ ಮಾಲೀಕರಾದ ಅಜಯ್ ಗುಪ್ತಾ ಮತ್ತು ಕ್ಲಬ್ ನ ನಾಲ್ವರು ವ್ಯವಸ್ಥಾಪಕರನ್ನು ಸಹ ಪೋಲಿಸರು ಬಂಧಿಸಿದ್ದಾರೆ.
ಈ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಬಾರದು. ಈ ಅಗ್ನಿ ಅವಗಡದಲ್ಲಿ ಮೃತರ ಕುಟುಂಬಸ್ಥರಿಗೆ ನ್ಯಾಯ ಸಿಗುವಂತೆ ಆರೋಪಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜೋಶಿ ಕುಟುಂಬಸ್ಥರು ಆಘ್ರಹಿಸಿದರು.