ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮನ್ನಣೆಯನ್ನು ಪಡೆದಿವೆ, ಗೀವಾ ರಾಜ್ಯದ ಐದು ಕೃಷಿ ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ. ಇವುಗಳಲ್ಲಿ ತಾಲಿಗಾಂವ ಊರಿನ ಬದನೇಕಾಯಿ, ಹಿಲಾರಿಯೊ ಮಾವು, ಕೊರಗುಟ್ ಅಕ್ಕಿ, ಗೋವಾ ಕಾಜು, ಮುಸರಾದ ಮಾವಿನಕಾಯಿ ಒಳಗೊಂಡಿದೆ.
ಈ ಮನ್ನಣೆಯಿಂದಾಗಿ ಗೋವಾ ಕೃಷಿ ಸಂಪ್ರದಾಯ,ಸ್ಥಳೀಯ ವಿಶೇಷತೆಗಳು, ಮತ್ತು ರೈತ ಕಠಿಣ ಪರಿಶೃಮಕ್ಕೆ ಅಧೀಕೃತ ಮನ್ನಣೆ ದೊರೆತಿದೆ. ಈ ನಿರ್ಧಾರವು ಭವಿಷ್ಯದಲ್ಲಿ ಈ ಉತ್ಪನ್ನಗಳ ಬ್ರ್ಯಾಂಡಿಂಗ್ ಅನ್ನು ಬಲಪಡಿಸುತ್ತದೆ ಮತ್ತು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗೋವಾದ ಕೃಷಿ ಉತ್ಪನ್ನಗಳ ಗುರುತನ್ನು ಬಲಪಡಿಸುತ್ತದೆ.
ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯೆ ನೀಡಿ- ಇದು ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಗೋವಾದ ಮಣ್ಣು,ಹವಾಮಾನ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿರುವುದು ರಾಜ್ಯದ ಕೃಷಿ ಶಕ್ತಿಗೆ ಸಾಕ್ಷಿಯಾಗಿದೆ. ಈ ಜಿಐ ಟ್ಯಾಗ್ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಪಡೆಯಲು ಹೆಚ್ಚಿನ ಸಹಾಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಐ ಟ್ಯಾಗ್ ಈ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಗುಣಲಕ್ಷಣಗಳನ್ನು ಕಾನೂನುಬದ್ಧವಾಗಿ ರಕ್ಷಿಸುತ್ತದೆ ಮತ್ತು ಅವುಗಳ ದುರುಪಯೋಗವನ್ನು ತಡೆಯುತ್ತದೆ. ಈ ಸಾಂಪ್ರದಾಯಿಕ ಮತ್ತು ಸ್ಥಳೀಯ ಉತ್ಪನ್ನಗಳನ್ನು ಸಂರಕ್ಷಿಸುವ ಮತ್ತು ಮೌಲ್ಯವರ್ಧನೆ ಮಾಡುವತ್ತ ವಿಶೇಷ ಒತ್ತು ನೀಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕೃಷಿ ತಜ್ಞರ ಜಂಟಿ ಪ್ರಯತ್ನದ ಮೂಲಕ ಈ ಮನ್ನಣೆಯನ್ನು ಸಾಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
