ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ “ವನ” ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುವ 6 ವರ್ಷದ ರಮಾ ವಿರಾಜ್ ಭಿಡೆ ಈ ಪುಟ್ಟ ಬಾಲಕಿಯು ತನ್ನ ಬುದ್ಧಿವಂತಿಕೆ ಹಾಗೂ ಸ್ಪಷ್ಠ ಉಚ್ಛಾರದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ. 50 ಸೆಕೆಂಡಿನಲ್ಲಿ ಸಂಪೂರ್ಣ ಗಣಪತಿ ಸ್ತೋತ್ರದ 8 ಶ್ಲೋಕಗಳನ್ನು ಶುದ್ಧವಾಗಿ ಪಠಿಸಿ ಕು.ರಮಾ ಇವಳು “ಏಷ್ಯನ್ ಬುಕ್ ಆಪ್ ರೆಕಾರ್ಡ” ನಲ್ಲಿ (Asian Book of Record) ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತೆ ಮಾಡಿದ್ದಾಳೆ. ಈ ಪುಟ್ಟ ಬಾಲಕಿಯ ಸಾಧನೆಗೆ ಇವಳಿಗೆ “ಗ್ರಾಂಡ್ ಮಾಸ್ಟರ್” (Grand Master) ಎಂಬ ಪದವಿ ನೀಡಿ ಗೌರವಿಸಲಾಗಿದೆ.
ಕುಮಾರಿ ರಮಾ ಇವಳು 17 ಜೂನ್ 2019 ರಲ್ಲಿ ಜನಿಸಿದ್ದು ಸದ್ಯ ಇವಳಿಗೆ 6 ವರ್ಷ 4 ತಿಂಗಳಾಗಿದೆ. ಗಣಪತಿ ಸ್ತೋತ್ರದಂತದ ಕಠಿಣ ಸಂಸ್ಕøತ ಶಬ್ದಗಳನ್ನು ಹೊಂದಿರುವ ಶ್ಲೋಕಗಳನ್ನು ಕುಮಾರಿ ರಮಾ ಇವಳು ಕೇವಲ 50 ಸೆಕೆಂಡಿನಲ್ಲಿ ಯಾವುದೇ ಅಡಚಣಿ ಇಲ್ಲದೆಯೇ ಸರಾಗವಾಗಿ ಏಕಾಗೃತೆಯಿಂದ ಸ್ಪಷ್ಠವಾಗಿ ಹೇಳುತ್ತಾಳೆ.
ಕುಮಾರಿ ರಮಾ ಇವಳ ಸಾಧನೆಗೆ ಗೋವಾ ರಾಜ್ಯವೇ ಹೆಮ್ಮೆ ಪಡುವಂತಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಈ ಬಾಲಕಿಯ ಸಾಧನೆಗೆ ಈಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಈಕೆ ಮಾಡಿರುವ ಈ ದೊಡ್ಡ ಸಾಧನೆಯು ರಾಜ್ಯದ ಇತರ ಮಕ್ಕಳಿಗೂ ಪ್ರೋತ್ಸಾಹದಾಕಯವಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪುಟ್ಟ ಬಾಕಿಯ ಸಾಧನೆಗೆ ಈಕೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ ಪ್ರಮಾಣಪತ್ರ ಹಾಗೂ ಗ್ರಾಂಡ್ ಮಾಸ್ಟರ್ ಎಂಬ ಪದಕ ನೀಡಿ ಸನ್ಮಾನಿಸಲಾಗಿದೆ.
