ಸುದ್ಧಿಕನ್ನಡ ವಾರ್ತೆ
ಪಣಜಿ: ಹಳೇಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ಗೋವಾಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹಳೇಯ ವರ್ಷಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಗೋವಾದ ಮೋರಜಿಮ್ ಬೀಚ್ ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಬೀಚ್ ನಲ್ಲಿ ಮುಳುಗಿ ಬಿಹಾರದ ಪ್ರವಾಸಿಗರೋರ್ವರು ಸಾವನ್ನಪ್ಪಿದ್ದು, ಇನ್ನೊರ್ವ ಪ್ರವಾಸಿಗರ ಸ್ಥಿತಿ ಗಂಭೀರವಾಗಿದೆ.

ಆದಿತ್ಯ ನಾರಾಯಣ (26) ಎಂಬ ಬಿಹಾರದ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಆದಿತ್ಯರಾಜ್ (25) ಎಂಬ ಪ್ರವಾಸಿಗರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಇಬ್ಬರೂ ಪ್ರವಾಸಿಗರು ಜೀವರಕ್ಷಕ ದಳದ ಸಿಬ್ಬಂಧಿಗಳು ನೀಡಿದ್ದ ಸೂಚನೆಯನ್ನು ನಿರ್ಲಕ್ಷಿಸಿದ್ದರು.

ರಾತ್ರಿ ಪ್ರವಾಸಿಗರಿಗೆ ನೀರಿನಿಂದ ದಡಕ್ಕೆ ಬರುವಂತೆ ಸೂಚನೆ ನೀಡಲಾಗುತ್ತಿತ್ತು. ಆದರೆ ಜೀವರಕ್ಷಕ ದಳದ ಸಿಬ್ಬಂಧಿಗಳು ನೀಡಿದ್ದ ಸೂಚನೆಯನ್ನು ಈ ಪ್ರವಾಸಿಗರು ನಿರ್ಲಕ್ಷಿಸಿದ್ದರು. ಈ ಇಬ್ಬರೂ ಪ್ರವಾಸಿಗರು ನೀರಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಜೀವರಕ್ಷಕ ದಳದ ಸಿಬ್ಬಂಧಿಗಳು ರಕ್ಷಿಸಿ ಹೊರ ತಂದರು. ಆದರೆ ಒಬ್ಬ ಪ್ರವಾಸಿಗ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರೂ ಪ್ರವಾಸಿಗರನ್ನು ತುಯೆ ಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಆದಿತ್ಯ ನಾರಾಯಣ ಎಂಬ ಪ್ರವಾಸಿಗ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಆದಿತ್ಯ ರಾಜ್ ಎಂಬ ಪ್ರವಾಸಿಗರಿಗೆ ಗೋವಾ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.