ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರ ಭಾರತ ಮತ್ತು ದೆಹಲಿಯಲ್ಲಿ ದಟ್ಟವಾದ ಮಂಜು ಕವಿದಿದ್ದು ವಿಮಾನ ಹಾರಾಟಕ್ಕೆ ತೀವ್ರ ತೊಂದರೆಯಾಗಿದೆ. ಭಾನುವಾರ ರಾತ್ರಿ ಗೋವಾದ ಮೋಪಾ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನವು ದಟ್ಟವಾದ ಮಂಜಿನಿಂದಾಗಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆಯೇ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಅಹಮದಾಬಾದ್ ಗೆ ತಿರುಗಿಸಲಾಗಿದೆ.
ಲಭ್ಯವಾದ ಮಾಹಿತಿಯ ಅನುಸಾರ- ಈ ವಿಮಾನವು ಭಾನುವಾರ ರಾತ್ರಿ 11.55 ಕ್ಕೆ ಗೋವಾದಿಂದ ಹೊರಟಿದ್ದು ಸೋಮವಾರ ಬೆಳಗಿನ ಜಾವ 2.35 ಕ್ಕೆ ದೆಹಲಿಗೆ ತಲುಪುವ ನಿರೀಕ್ಷೆಯಿತ್ತು. ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾಣ ಲ್ಯಾಂಡ್ ಮಾಡಲು ಸಧ್ಯವಾಗದೆಯೇ ಅಹಮದಾಬಾದ್ ಗೆ ತಿರುಗಿಸಿದ ಘಟನೆ ನಡೆದಿದೆ.
