ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ಸೇತುವೆ ನಿರ್ಮಾಣದ ಉದ್ದೇಶದಿಂದ ಒಂದು ತಿಂಗಳು ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಟ ನಡೆಸುವವರು ಭಾರಿ ಟ್ರಾಫಿಕ್ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಲಿದೆ.

ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ವೇಗಗೊಳಿಸಲು 2026 ರ ಜನವರಿ 2 ರಿಂದ ಮಾರ್ಚ 2 ರವರೆಗೆ ಒಡಿಪಿ ರಸ್ತೆಯಿಂದ ದಾಮಿಯನ್ ದಿ ಗೋವಾ ಹಾಗೂ ಕದಂಬ ಹೋಟೆಲ್ ನಿಂದ ಕೊಕೆರೊ ಸರ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ತಿಂಗಳು ಎಲ್ಲ ಬಗೆಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಬಂದ್ ಮಾಡಲಾಗುತ್ತಿದೆ. ಉತ್ತರ ಗೋವಾ ಜಿಲ್ಲಾಧಿಕಾರಿ ಅಂಕಿತ್ ಯಾದವ್ ರವರು ಈ ಕುರಿತ ಆದೇಶವನ್ನು ಹೊರಡಿಸಿದ್ದಾರೆ. ಹೆದ್ದಾರಿಯ ಎರಡೂ ರಸ್ತೆಗಳು ಅಂದು ಬಂದ್ ಇರಲಿದೆ. ಇನ್ನುಳಿದ ಭಾಗದಲ್ಲಿ ಎಂದಿನಂತೆಯೇ ವಾಹನ ಸಂಚಾರ ಮುಂದುವರೆಯಲಿದೆ.

ಗೋವಾ ಭಾಗದಿಂದ ಮುಂಬಯಿ ಭಾಗಕ್ಕೆ ತೆರಳಲು ಪರ್ವರಿ ಮೂಲಕವೇ ಸಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಭಾರಿ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇರತುತ್ತದೆ. ಆದರೆ ಇದೀಗ ಪರ್ವರಿ ಭಾಗದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಒಂದು ತಿಂಗಳು ಬಂದ್ ಆಗುತ್ತಿರುವುದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಲಿದೆ. ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿದರೂ ಕೂಡ ಆ ರಸ್ತೆಗಳೆಲ್ಲ ಕಿರಿದಾಗಿರುವುದರಿಂದ ಟ್ರಾಓಇಕ್ ಸಮಸ್ಯೆ ಎದುರಿಸುವುದು ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.