ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಾದೇಶ್ ತಾಲೂಕಿನಲ್ಲಿ 6 ವರ್ಷದಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಭಿಸಿದಂತೆ ಪರ್ವರಿಯ ಪೋಲಿಸರು ಶಂಕಿತ ಆರೋಪಿ ಅಲ್ಲಾಭಕ್ಷ ಸೈದಾಬಾಡೆ (46, ಗೋವಾ ಪರ್ವರಿ ನಿವಾಸಿ) ಈತನನ್ನು ಪೋಲಿಸರು ಬಂಧಿಸಿದ್ದಾರೆ. ಪೋಲಿಸರು ಈತನ ವಾಹನವನ್ನೂ ವಷಪಡಿಸಿಕೊಂಡಿದ್ದಾರೆ.
ಈ ಘಟನೆಯು ಕಳೆದ ಸುಮಾರು ಒಂದು ತಿಂಗಳ ಹಿಂದೆಯೇ ನಡೆದಿತ್ತು ಎನ್ನಲಾಗಿದೆ. ಆದರೆ ಸಂತ್ರಸ್ತ ಬಾಲಕಿಯು ಭಾನುವಾರ ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯ ಮುಖಭಾವದಲ್ಲಿ ಆದ ಬದಲಾವಣೆಯನ್ನು ಪೋಷಕರು ಗಮನಿಸಿದ್ದರು. ಅವರು ಆಕೆಯನ್ನು ವಿಚಾರಿಸಿದಾಗ ಶಾಲಾ ವಾಹನ ಚಾಲಕ ನಡೆಸಿದ ಕೃತ್ಯದ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಬಾಲಕಿಯು ಹೇಳಿದ ಘಟನೆಯ ಮಾಹಿತಿ ಆಘಾತಕಾರಿಯಾಗಿತ್ತು. ಕೂಡಲೇ ಪೋಷಕರು ಪರ್ವರಿ ಪೋಲಿಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತ ಬಾಲಕಿಯು ಬಾರ್ದೇಸ್ ತಾಲೂಕಿನ ಶಾಲೆಯಲ್ಲಿ ಓದುತ್ತಿದ್ದಾಳೆ. ಈಕೆಗೆ ಮನೆಯಿಂದ ಶಾಲೆಗೆ ಹೋಗಿ ಬರಲು ವ್ಯಾನ ವ್ಯವಸ್ಥೆ ಮಾಡಿದ್ದರು. ಪ್ರತಿದಿನ ಈ ಬಾಲಕಿ ಶಾಲೆಗೆ ತೆರಳುವಾಗ ಮೊದಲು ವ್ಯಾನ ಹತ್ತುತ್ತಿದ್ದಳು ಹಾಗೂ ಶಾಲೆಯಿಂದ ಬರುವಾಗ ಕೊನೇಯಲ್ಲಿ ವ್ಯಾನ ಇಳಿಯುತ್ತಿದ್ದಳು. ಇದರಿಂದಾಗಿ ಈಕೆಯು ಶಾಲೆಗೆ ಹೋಗುವಾಗಲೂ ಹಾಗೂ ಶಾಲೆಯಿಂದ ಬರುವಾಗಲು ಒಂಟಿಯಾಗಿರುತ್ತಿದ್ದಳು. ಇದನ್ನೇ ವ್ಯಾನ್ ಚಾಲಕ ದುರ್ಬಳಕೆ ಮಾಡಿಕೊಂಡ ಎಂದೇ ಹೇಳಲಾಗಿದೆ.
ದೂರು ಸಲ್ಲಿಕೆಯಾದ ಕೂಡಲೇ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಶಂಕಿತ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
