ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಜಿಲ್ಲಾ ಪಂಚಾಯತ ಚುನಾವಣೆಯ ಫಳಿತಾಂಶದ ಮೂಲಕ ರಾಜ್ಯದ ರಾಜಕೀಯ ನಿಲುವು ಮತ್ತೊಮ್ಮೆ ಸ್ಪಷ್ಟವಾಗಿದೆ. ಬಿಜೆಪಿ ಹಾಗೂ ಎಂಜಿಪಿ ಮೈತ್ರಿಗೆ ಗೋವಾ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಗೋವಾ ರಾಜ್ಯದ ಜನತೆ ಮತ್ತೊಮ್ಮೆ ಕಾಂಗ್ರೇಸ್ ನಿರಾಕರಿಸಿದ್ದಾರೆ. ರಾಜ್ಯದ ಜನತೆ ಡಬಲ್ ಎಂಜಿನ್ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಜಿ.ಪಂ ಚುನಾವಣೆಯ ಯಶಸ್ಸಿಗೆ ಗೋವಾ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾಜೆ ಘರ್ ಯೋಜನೆಯ ಬಹುಮುಖ್ಯ ಪಾಲಿದೆ. ಇದರ ಕೃತಜ್ಞತೆಯ ಮೂಲಕ ರಾಜ್ಯ ಜನತೆ ಬಿಜೆಪಿ ಮೈತ್ರಿಗೆ ಜಿ.ಪಂ ಚುನಾವಣೆಯಲ್ಲಿ ಬಹುಮತ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು. ಈ ವಿಜಯರು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವಕ್ಕೆ ಸಲ್ಲುತ್ತದೆ ಎಂದರು.
ಬಿಜೆಪಿ ಸರ್ಕಾರವು ವಿಕಸಿತ ಗೋವಾ ಹಾಗೂ ವಿಕಸಿತ ಭಾರತ ನನಸು ಮಾಡಲು ಕಂಕಣಬದ್ಧವಾಗಿದೆ. ಈ ಫಲಿತಾಂಶದ ಮೂಲಕ ಗೋವಾದಲ್ಲಿ ಬಿಜೆಪಿ ನಂ.1 ಪಕ್ಷ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ದಾಮು ನಾಯಕ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಧನ್ಯವಾದ…
ಗೋವಾ ಜಿಲ್ಲಾ ಪಂಚಾಯತ ಚುನಾಬಣೆಯಲ್ಲಿ ಬಿಜೆಪಿ,ಎಂಜಿಪಿ ಮೈತ್ರಿ ಕೂಟಕ್ಕೆ ಬಹುಮತ ನೀಡಿ ಆಶೀರ್ವದಿಸಿದ್ದಕ್ಕೆ ಗೋವಾದ ಸಹೋದರ ಸಹೋದರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೋವಾದ ಬೆಳವಣಿಗೆಗೆ ತಮ್ಮ ಪ್ರಯತ್ನಗಳಿಗೆ ಹೆಚ್ಚಿನ ಚೈತನ್ಯ ನೀಡುತ್ತದೆ. ಗೋವಾ ರಾಜ್ಯದ ಜನರ ಕನಸು ನನಸಾಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಕಾರ್ಯಕರ್ತರು ತಳಮಟ್ಟದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
