ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಈ ಎರಡು ಜಿಲ್ಲೆಯ 50 ಕ್ಷೇತ್ರಗಳಿಗೆ ಜಿಲ್ಲಾಪಂಚಾಯತ ಚುನಾವಣೆ ಶನಿವಾರ ನಡೆದಿದೆ. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುವ ದೃಶ್ಯ ಕಂಡುಬಂತು. ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಶೇ 63.59 ರಷ್ಟು ಮತದಾನವಾಗಿದೆ.
ಗೋವಾ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿಯೂ ಶಾಂತಿಯುತ ಮತದಾನ ನಡೆದಿದೆ. ಬೆಳಿಗ್ಗೆ 8 ಗಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಾಗಿನಿಂದ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿರುವ ದೃಶ್ಯ ಕಂಡುಬಂತು. ಬೆಳಿಗ್ಗೆ 78 ರಿಂದ 12 ಗಂಟೆಯವರೆಗೆ ಶೇ 32.58 ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾನ್ಹ 2 ಗಂಟೆಯವರೆಗೆ ಶೇ 48.76 ರಷ್ಟು ಮತದಾನವಾಗಿದೆ. \
ಅಂಗವಿಕಲರು, ವಯೋವೃದ್ಧರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
