ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜವು ಗೋವಾದಲ್ಲಿ ಕಳೆದ 40 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಪ್ರಸಕ್ತ ವರ್ಷ 40 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ಇಷ್ಟೇ ಅಲ್ಲದೆಯೇ ಗೋವಾ ವಿಮುಕ್ತಿ ದಿನದ ಅಂಗವಾಗಿ ಗೋವಾದಲ್ಲಿ ಕಳೆದ ಸುಮಾರು 8 ವರ್ಷಗಳಿಂದ ಸತತವಾಗಿ ರಕ್ತದಾನ ಶಿಭಿರವನ್ನು ಆಯೋಜಿಸುತ್ತಾ ಬಂದಿದೆ. ಈ ಮೂಲಕ ಗೋವಾ ಜನರ ರಕ್ತದೊಂದಿಗೆ ಕನ್ನಡಿಗರ ರಕ್ತ ಕೂಡ ಬೆರೆತುಹೋಗಿದೆ ಎಂದು ಗೋವಾದ ಹಿರೀಯ ಪತ್ರಕರ್ತ ಹಾಗೂ ಗೋವಾ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘಟನೆಯ ಸಹಕಾರ್ಯದರ್ಶಿ ವಾಸುದೇವ ಪಾಗಿ ನುಡಿದರು.

ಗೋವಾ ವಿಮುಕ್ತಿ ದಿನದ ಅಂಗವಾಗಿ ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ, ಗೋವಾ ಕೇಸರಿ, ಶ್ರೀಮೀಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಗೋವಾ ಮೆಡಿಕಲ್ ಕಾಲೇಜು ಬ್ಲಡ್ ಬ್ಯಾಂಕ್ ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಭಿರದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ-ಗೋವಾ ಸಂಬಂಧವು ಇಂದು ನಿನ್ನೆಯದಲ್ಲ. ಎರಡೂ ರಾಜ್ಯಗಳ ಸಾಂಸ್ಕøತಿಕ ಸಂಬಂಧವಿದೆ. ಎರಡೂ ರಾಜ್ಯಗಳ ನಡುವೆ ವ್ಯಾಪಾರ ವ್ಯವಹಾರಗಳು ನಡೆದುಕೊಂಡು ಬಂದಿದೆ, ಉದ್ಯೋಗದಲ್ಲಿಯೂ ಅವಲಂಭಿಸಿದೆ. ಇದರಿಂದಾಗಿ ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ಯಾರಾದರೂ ಒಡಕು ಹಿಟ್ಟಿಸು ಪ್ರಯತ್ನಿಸಿದರೂ ಕೂಡ ಅದು ಸಾಧ್ಯವಾಗುವುದಿಲ್ಲ. ಬದಲಾಗಿ ಒಂದಕ್ಕೊಂದು ರಾಜ್ಯಗಳು ಇನ್ನಷ್ಟು ಬಲವಾಗುತ್ತದೆ. ಎರಡೂ ರಾಜ್ಯಗಳ ನಡುವೆ ಪುರಾತನ ಸಂಸ್ಕಾರವಿದೆ. ಈ ಎರಡೂ ರಾಜ್ಯಗಳ ನಡುವೆ ರಕ್ತದ ಸಂಬಂಧವಿದೆ ಎಂದು ವಾಸುದೇವ ಪಾಗಿ ನುಡಿದರು.

ಗೋವಾ ಕನ್ನಡ ಸಮಾಜವು ಯಾವುದೇ ಪ್ರಚಾರಕ್ಕಾಗಿ ಇಂತಹ ಕಾರ್ಯಕ್ರಮ ಮಾಡುತ್ತಿಲ್ಲ. ಕಳೆದ 40 ವರ್ಷಗಳಿಂದ ಇಂತಹ ಸಮಾಜ ಸೇವಾ ಕಾರ್ಯವನ್ನು ಕೂಡ ಮುಂದುವರೆಸಿಕೊಂಡು ಬಂದಿದೆ ಇದು ಹೆಮ್ಮೆಯ ಸಂಗತಿ ಎಂದು ವಾಸುದೇವ ಪಾಗಿ ನುಡಿದರು.

ಈ ಸಂದರ್ಭದಲ್ಲಿ ಗೋವಾ ಬಾಂಬೋಲಿ ಆಸ್ಪತ್ರೆಯ ವೈದ್ಯರಾದ ಕನ್ನಡಿಗ ಡಾ.ಸುಧೀರ್ ಎಂ ನರ್ಸಾಪುರ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭದಲ್ಲಿ ಗೋವಾ ಕೇಸರಿಯ ಸಂಪಾದಕರಾದ ಶ್ರೀನಿವಾಸ್ ಪೈ ಗಂಗೊಳ್ಳಿ, ಪತ್ರಕರ್ತ ಪ್ರಕಾಶ್ ಭಟ್, ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ, ಗೋವಾ ಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಾಮಸುದ್ದೀನ್ ಸೊಲ್ಲಾಪುರಿ, ಸಿ.ಜಿ ಕಣ್ಣೂರ್, ನೀರಜ್ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಗೋವಾ ಕೇಸರಿಯ ಶ್ರೀನಿವಾಸ್ ಪೈ ವಂದಿಸಿದರು. ಸಂಆ ಕಾರ್ಯಕ್ರಮದ ನಂತರ ನಡೆದ ರಕ್ತದಾನ ಶಿಭಿರದಲ್ಲಿ ಕನ್ನಡಿಗರು ಹಾಗೂ ಗೋವನ್ನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಿದರು.


ನಂತರ ಗೋವಾ ವಿಮುಕ್ತಿ ದಿನದ ಅಂಗವಾಗಿ ಗೋವಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 102 ವರ್ಷ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸ್ವಾತಂತ್ರ್ಯ ಹೋರಾಟಗಾರರಾದ ಲಿಬಿಯಾ ಲೋಬೊ ಸರ್ದೇಸಾಯಿ ರವರನ್ನು ವಿಶೇಷವಾಗಿ ಗೋವಾ ಕನ್ನಡ ಸಮಾಜದ ವತಿಯಿಂದ ಸತ್ಕರಿಸಲಾಯಿತು.