ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸಾಂತಕ್ರೂಜ್ ಭಾಗದಲ್ಲಿ ನಾಕಾ ತಪಾಸಣೆ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂಧಿಗಳು  IAS ಅಧಿಕಾರಿಯ ತಪಾಸಣೆ ನಡೆಸಿದರು. ಅಧಿಕಾರಿಯು ತನ್ನ ಗುರುತನ್ನು ಬಹಿರಂಗ ಪಡಿಸಿದ ನಂತರವೂ ಪೋಲಿಸ್ ಸಿಬ್ಬಂಧಿ ಹುಡುಕಾಟ ಮುಂದುವರೆಸಿದ್ದರಿಂದ ಈ ಘಟನೆಯು ಸದ್ಯ ಭಾರಿ ಚರ್ಚೆಯ ವಿಷಯವಾಗಿದೆ.

ಈ ತಪಾಸಣೆಯ ನಂತರ ಈ ಐಎಎಸ್ ಅಧಿಕಾರಿಯು ಹಿರೀಯ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ನಂತರ ಉತ್ತರ ಗೋವಾ ಜಿಲ್ಲಾ ಪೋಲಿಸ್ ಅಧಿಕಾರಿಗಳು ಚೆಕ್ ನಾಕಾದಲ್ಲಿದ್ದ ಪೋಲಿಸ್ ಸಿಬ್ಬಂಧಿಗಳನ್ನು ಉಟಾಬಸ್ ಮಾಡಲು ಆದೇಶಿಸಿದ್ದಾರೆ. ಈ ಆದೇಶದಿಂದಾಗಿ ಪೋಲಿಸ್ ಸಿಬ್ಬಂಧಿಗಳಲ್ಲಿ ಬೇಸರ ವ್ಯಕ್ತವಾಗುವಂತಾಗಿದೆ. ನಿಯಮಗಳ ಅನುಸಾರ ನಾಕೆಯಲ್ಲಿ ತಪಾಸಣೆ ನಡೆಸಿದ್ದ ಪೋಲಿಸ್ ಸಿಬ್ಬಂಧಿಗಳನ್ನು ಶ್ಲಾಘಿಸುವ ಬದಲು ಹಿರೀಯ ಪೋಲಿಸ್ ಅಧಿಕಾರಿಗಳು ಉಟಾಬಸ್ ಶಿಕ್ಷೆ ನೀಡಿರುವುದಕ್ಕೆ ಪೋಲಿಸ್ ಸಿಬ್ಬಂಧಿಗಳಲ್ಲಿ ಬೇಸರ ವ್ಯಕ್ತವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸಂಬಂಧಿತ ಆದೇಶವು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿಸ್ತಿನ ಹೆಸರಿನಲ್ಲಿ ಇಂತಹ ಶಿಕ್ಷೆ ನೀಡುವುದು ಕಾನೂನಿಗೆ ವಿರುದ್ಧವಾಗಿದೆ. ಪೋಲಿಸ್ ಸಿಬ್ಬಂಧಿ ತಮ್ಮ ಕರ್ತವ್ಯ ನಿರ್ವಹಿಸುವಾಗ ನಿಯಮಗಳನ್ನು ಪಾಲಿಸಿದ್ದರೆ ಅಂತವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.
ಗೋವಾದ ಈ ಘಟನೆಯು ಪೋಲಿಸ್ ಶಿಸ್ತು ಮತ್ತು ಸಾಮಾನ್ಯ ತನಿಖಾ ಕಾರ್ಯವಿಧಾನಗಳ ಬಗ್ಗೆ ಜನಸಾಮಾನ್ಯರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.