ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ವಿಶ್ವವಿದ್ಯಾಲಯದ (Goa University) ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು (Election Cancelled) ಮಂಗಳವಾರ ದಿಢೀರ್ ರದ್ಧುಪಡಿಸಿದ ನಂತರ ಗೋವಾ ವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಉಧ್ವಿಗ್ನ ವಾತಾವರಣ ಸೃಷ್ಠಿಯಾಗಿದೆ. ಚುನಾವಣೆ ರದ್ಧಾಗಿರುವುದನ್ನು ಪ್ರಶ್ನಿಸಿ ಎರಡೂ ಬಣದ ವಿದ್ಯಾರ್ಥಿಗಳು ಕಲ್ಯಾಣ ವಿಭಾಗದ ಮುಂದೆ ಪ್ರತಿಭಟನೆ ನಡೆಸಿದರು, NSUI ಗೆಲುವಿನ ಭಯದಿಂದ ಚುನಾವಣೆಯನ್ನು ರದ್ಧುಗೊಳಿಸಲಾಗಿದೆ ಎಂದು ಆರೋಪಿಸಿದೆ.
ಗೋವಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿತ್ ಚುನಾವಣೆ ಮಂಗಳವಾರ ಬೆಳಿಗ್ಗೆ 10.30 ಕ್ಕೆ ನಡೆಯಬೇಕಿತ್ತು. ಗೋವಾ ವಿಶ್ವವಿದ್ಯಾಲಯವು ಜಿ.ಪಂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಿ ಚುನಾವಣೆಯನ್ನು ರದ್ಧುಗೊಳಿಸಲಾಗಿದೆ. ಈ ದಿಢೀರ್ ನಿರ್ಣಯವು ಮತ ಚಲಾಯಿಸಲು ಬಂದ ವಿದ್ಯಾರ್ಥಿಗಳನ್ನು ನಿರಾಸೆಗೊಳಿಸಿದೆ. ಇದು ತೀವ್ರ ಪ್ರತಿಭಟನೆಗೂ ಕಾರಣವಾಗಿದೆ.
ಚುನಾವಣೆಗೆ ಮತ ಚಲಾವಣೆಗೂ 15 ನಿಮಿಷ ಮುನ್ನ ಗೋವಾ ವಿಶ್ವವಿದ್ಯಾಲಯವು ಚುನಾವಣೆಯನ್ನು ಇದ್ದಕ್ಕಿದ್ದಂತೆಯೇ ರದ್ಧುಗೊಳಿಸಿದೆ. ನಾಮಪತ್ರ ಪರಿಶೀಲನೆ ಸೇರಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದರೂ ಕೂಡ ಚುನಾವಣೆಯನ್ನು ರದ್ಧುಗೊಳಿಸಲಾಗಿದೆ ಎಂದು NSUI ಅಧ್ಯಕ್ಷ ನೌಶಾದ್ ಚೌಧರಿ ಆರೋಪಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಬಿವಿಪಿ ಗೆಲ್ಲಲು ಕಡಿಮೆ ಮತಗಳನ್ನು ಹೊಂದುವ ನಿರೀಕ್ಷೆಯಿತ್ತು. ಚುನಾವಣೆ ರದ್ಧಾಗಲು ಇದು ಮುಖ್ಯ ಕಾರಣವಾಗಿರಬಹುದು. ನಮ್ಮ ಗೆಲುವು ಖಚಿತವಾಗಿತ್ತು. ಈ ಚುನಾವಣೆ ಮುಂದೂಡಿದರೂ ಕೂಡ ನಾವೇ ಗೆಲ್ಲುತ್ತೇವೆ. ಚುನಾವಣೆ ರದ್ಧುಗೊಳಿಸಿದ ನಿರ್ಧಾರವನ್ನು ನಾವು ಹೈಕೋರ್ಟ ನಲ್ಲಿ ಪ್ರಶ್ನಿಸುತ್ತೇವೆ ಎಂದು ನೌಶಾದ್ ಚೌಧರಿ ಹೇಳಿದ್ದಾರೆ.
