ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ನೈಟ್ ಕ್ಲಬ್ ನಲ್ಲಿ  (Goa Night Club) ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ ಹಾಗೂ ಗೌರವ್ ಲೂಥ್ರಾ ರವರನ್ನು ಗೋವಾ ಪೋಲಿಸರು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಗೋವಾದಲ್ಲಿ ಈ ದುರ್ಘಟನೆಯ ನಂತರ ನೈಟ್ ಕ್ಲಬ್ ಮಾಲೀಕರಿಬ್ಬರೂ ಥೈಲ್ಯಾಂಡ್ ಗೆ ಪಲಾಯನಗೈದಿದ್ದರು. ನಂತರ ನೈಟ್ ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರ ಪಾಸ್ ಪೊರ್ಟಗಳನ್ನು ರದ್ಧುಗೊಳಿಸಲಾಗಿತ್ತು. ಕಳೆದ ನಾಲ್ಕು ದಿನದ ಹಿಂದೆಯೇ ಇವರನ್ನು ಥೈಲ್ಯಾಂಡ್ ಪೋಲಿಸರ ಬಂಧಿಸಿದ್ದರು. ಭಾರತಕ್ಕೆ ಅವರನ್ನು ಮರಳಿ ಕರೆತರಲು ರಾಯಭಾರ ಕಛೇರಿಯಿಂದ ತುರ್ತು ಪ್ರಮಾಣಪತ್ರದ ಅಗತ್ಯವಿತ್ತು. ಇದರಿಂದಾಗಿ ಈ ಕಾಗದಪತ್ರಗಳ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಂಗಳವಾರ ಈ ಇಬ್ಬರೂ ಆರೋಪಿಗಳನ್ನು ಭಾರತಕ್ಕೆ ಗಡಿಪಾರು ಮಾಡಲಾಯಿತು.

ದೆಹಲಿ ವಿಮಾನ ನಿಲ್ದಾಣಕ್ಕೆ ಆರೋಪಿಗಳು ಬಂದಿಳಿಯುತ್ತಿದ್ದಂತೆಯೇ ಗೋವಾ ಪೋಲಿಸರು ಅವರನ್ನು ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ.