ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದ ಮಾಜಿ ಸಚಿವೆ ಡಾ. ಅಂಜಲಿ ನಿಂಬಾಳಕರ್ (Dr Anjali Nimablka)  ರವರು ವಿಮಾನದಲ್ಲಿ ಹೃದಯಾಘಾತ ಸಂಭವಿಸಿದ ಮಹಿಳೆಗೆ ವೈದ್ಯಕೀಯ ಸೇವೆ ಮಾಡಿ ವಿದೇಶಿ ಮಹಿಳೆಯೋರ್ವರ ಜೀವ ರಕ್ಷಿಸಿದ್ದಾರೆ. ಗೋವಾದಿಂದ ದೆಹಲಿಗೆ ಇಂಡಿಗೊ ( IndiGo flight 6E 2091) ವಿಮಾನದಲ್ಲಿ ಪ್ರಯಾಣ ನಡೆಸುತ್ತಿದ್ದಾಗ ಈ ಘಟನೆ ಇತ್ತಿಚೆಗೆ ನಡೆದಿದೆ.

ಗೋವಾದ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯಾನ್ಹ 1 ಗಂಟೆಯ ಸುಮಾರು ದೆಹಲಿಗೆ ಇಂಡಿಗೊ ವಿಮಾನ ಪ್ರಯಾಣ ಬೆಳೆಸಿತ್ತು. ವಿಮಾನ ಸುಮಾರು 30 ಅಡಿ ಎತ್ತರಕ್ಕೆ ತಲುಪುತ್ತಿದ್ದಂತೆಯೇ ಒಬ್ಬ ವಿದೇಶಿ ಮಹಿಳೆಗೆ ಇದ್ದಕ್ಕಿದ್ದಂತೆಯೇ ಹೃದಯಾಘಾತ ಸಂಭವಿಸಿ ಆಕೆ ಪ್ರಜ್ಞೆ ತಪ್ಪಿಬಿದ್ದಿದ್ದಳು. ಈ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರಲ್ಲಿ ಆತಂಕ ಎದುರಾಯಿತು.

ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ.ಅಂಜಲಿ ಲಿಂಬಾಳಕರ್ ಕೂಡಲೇ ವೈದ್ಯಕೀಯ ಸೇವೆಗೆ ಪ್ರಾಧಾನ್ಯತೆ ನೀಡಿ ಈ ವಿದೇಶಿ ಮಹಿಳೆಗೆ ವೈದ್ಯಕೀಯ ತಪಾಸಣೆ ನಡೆಸಿದರು. ಕೂಡಲೆ ವಿದೇಶಿ ಮಹಿಳೆಯ ಕೈ ನಾಡಿಯನ್ನು ತಪಾಸಣೆ ನಡೆಸಿ ಸಿಪಿಆರ್ ತಪಾಸಣೆ ನಡೆಸಿ ವಿದೇಶಿ ಮಹೀಲೆಯನ್ನು ಎಚ್ಚರಗೊಳಿಸಿದರು.

ಸುಮಾರು ಎರಡು ಎರಡೂವರೆ ತಾಸು ಪ್ರಯಾಣ ನಡೆಸುವಾಗ ಡಾ.ಅಂಜಲಿ ಲಿಂಬಾಳಕರ್ ರವರು ಈ ವಿದೇಶಿ ಮಹಿಳೆಯ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಂಡರು. ನಂತರ ದೆಹಲಿ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಡಾ.ಅಂಜಲಿ ನಿಂಬಾಳಕರ್ ಅಂಬುಲೆನ್ಸ ವರೆಗೂ ತೆರಳಲು ಸಹಾಯ ಮಾಡಿದರು. ಅಂಜಲಿ ನಿಂಬಾಳಕರ್ ರವರು ವಿಮಾನದಲ್ಲಿ ವಿದೇಶಿ ಮಹಿಳೆಗೆ ನೀಡಿರುವ ಉತ್ತಮ ಉಪಚಾರನ್ನು ವಿಮಾನದಲ್ಲಿದ್ದ ಪ್ರಯಾಣಿಕರು ಶ್ಲಾಘಿಸಿದ್ದಾರೆ.

 

ಡಾ.ಅಂಜಲಿ ನಿಂಬಾಳಕರ್ ರವರು ದೆಹಲಿಯಲ್ಲಿ ಆಯೋಜಿಸಿದ್ದ ರ್ಯಾಲಿಗೆ ಗೋವಾದಿಂದ ವಿಮಾನದ ಮೂಲಕ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹೈದಯಾಘಾತ ಸಂಭವಿಸಿದ ಕೂಡಲೆ ನಿಂಬಾಳಕರ್ ರವರ ಚಿಕಿತ್ಸೆಯಿಂದ ಎಚ್ಚರವಾದ ಕೂಡಲೇ ವಿದೇಶಿ ಮಹಿಳೆಯು ವೈದ್ಯರ ಬಳಿ ನನ್ನನ್ನು ಬಿಟ್ಟುಹೋಗಬೇಡಿ ಎಂದು ಹೇಳಿದಳು. ಇದರಿಂದಾಗಿ ವಿಮಾನ ಲ್ಯಾಂಡ್ ಆಗುವ ವರೆಗೂ ಡಾ.ಅಂಜಲಿ ರವರು ಆಕೆಯ ಬಳಿಯೇ ಕುಳಿತುಕೊಂಡಿದ್ದರು. ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದ ಕೂಡಲೇ ಆಕೆಯನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಡಾ.ಅಂಜಲಿ ನಿಂಬಾಳಕರ್ ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ-ಈ ವಿದೇಶಿ ಮಹಿಳೆಗೆ ಮೊದಲ ಹೃದಯಾಘಾತ ಸಂಭವಿಸಿದ ಅರ್ಧ ಘಂಟೆಯಲ್ಲಿಯೇ ಮತ್ತೆ ಎರಡನೇಯ ಬಾರಿ ಹೃದಯಾಘಾತ ಸಂಭವಿಸಿದೆ. ವಿಮಾನದಲ್ಲಿ ಹೃದಯಾತ ಸಂಭವಿಸಿದ ರೋಗಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವುದು ನನ್ನ ನೀವನದಲ್ಲಿ ಮೊದಲ ಘಟನೆ. ನನ್ನ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ ಎಂದು ಹೇಳಿದ್ದಾರೆ.

ವೈದ್ಯೋ ನಾರಾಯಣೋ ಹರಿಃ…
ಪುರಾಣಗಳಲ್ಲಿಯೂ ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಹಲವು ವೈದ್ಯರು ಕೇವಲ ಹಣಕ್ಕಾಗಿ ಮಾತ್ರ ಬಾಯಿ ಬಿಡುವುದನ್ನು ಕಾಣುತ್ತೇವೆ. ಆದರೆ ವೈದ್ಯರ ಇಂತಹ ಗುಣಗಳು ಇತರರಿಗೂ ಮಾರ್ಗದರ್ಶನವಾಗಿದೆ. ತಾನೊಬ್ಬ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ತುರ್ತು ಪರಿಸ್ಥಿತಿಯಲ್ಲಿ ತಮ್ಮ ವೈದ್ಯಕೀಯ ಸೇವೆಯ ಮೂಲಕ ಒಬ್ಬ ರೋಗಿಯ ಜೀವ ಉಳಿಸಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.