ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿನ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ಮಾಲೀಕರಾದ ಸೌರಬ್ ಲುಥ್ರಾ ಹಾಗೂ ಗೌರವ್ ಲುಥ್ರಾ ಸಹೋದರರನ್ನು ಥೈಲ್ಯಾಂಡ್ ಪೋಲಿಸರು ಭಾರತಕ್ಕೆ ಕಳುಹಿಸಲು ಅಗತ್ಯ ಕಾನೂನು ಸಿದ್ಧತಾ ಕಾರ್ಯ ಕೈಗೊಂಡಿದ್ದು, ಕಾಗದಪತ್ರಗಳ ಪ್ರಕ್ರಿತೆ ಪೂರ್ಣಗೊಂಡರೆ ಈ ಇಬ್ಬರೂ ಆರೋಪಿಗಳನ್ನು ಶೀಘ್ರವೇ ಭಾರತಕ್ಕೆ ಕರೆತರುವ ಸಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗೋವಾದ ಹಡಪಡೆಯ ನೈಟ್ ಕ್ಲಬ್ ನಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ವಿದೇಶಕ್ಕೆ ಪಲಾಯನ ಮಾಡಿದ್ದ ಕ್ಲಬ್ ಮಾಲೀಕರಾದ ಸೌರಬ್ ಲುಥ್ರಾ ಹಾಗೂ ಗೌರವ್ ಲುಥ್ರಾ ಈ ಇಬ್ಬರು ಸಹೋದರರನ್ನು ಥೈಲ್ಯಾಂಡ್ ನಲ್ಲಿ ಪೋಲಿಸರು ಬಂಧಿಸಿದ್ದರು.
ಈ ಇಬ್ಬರೂ ಆರೋಪಿಗಳನ್ನು ಥೈಲ್ಯಾಂಡ್ ನಲ್ಲಿ ಪೋಲಿಸರು ಬಂಧಿಸಿದ್ದರೂ ಕೂಡ ಇವರಿಬ್ಬರ ಪಾಸ್ ಪೋಟ್ ಆಗಲೇ ರದ್ಧುಗೊಳಿಸಲಾಗಿದ್ದರಿಂದ ಇವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕಾಗದಪತ್ರಗಳ ಕಾರ್ಯ ಪೂರ್ಣಗೊಳ್ಳುತ್ತಿದ್ದು ಶೀಘ್ರದಲ್ಲಿಯೇ ಈ ಇಬ್ಬರೂ ಆರೋಪಿಗಳನ್ನು ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎನ್ನಲಾಗಿದೆ.
