ಸುದ್ಧಿಕನ್ನಡ ವಾರ್ತೆ
ಡಿಸೆಂಬರ್ 20 ರಂದು ಗೋವಾದಲ್ಲಿ ಜಿಲ್ಲಾ ಪಂಚಾಯತ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ವಾಸ್ಕೊ ಸಾಂಕೋಲಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕನ್ನಡಿಗರಾದ ಹಾಗೂ ಕನ್ನಡಿಗರ ಪರ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ರಾಜೇಶ್ ಶೆಟ್ಟಿ ರವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. ಗೋವಾದಲ್ಲಿ ಸರ್ಕಾರಿ ಮಟ್ಟದಲ್ಲಿ ಜಿಲ್ಲಾ ಪಂಚಾಯತದಲ್ಲಿ ಕನ್ನಡಿಗರ ಪರ ಧ್ವನಿಯೆತ್ತಲು ಕನ್ನಡಿಗರೆಲ್ಲ ಒಗ್ಗೂಡಿ ರಾಜೇಶ್ ಶೆಟ್ಟಿ ರವರನ್ನು ಬಹುಮತ ನೀಡಿ ಆಯ್ಕೆ ಮಾಡಬೇಕಿದೆ.

ಕನ್ನಡಿಗರ ಪರ ಹೋರಾಟ ಮಾಡುತ್ತಲೇ ಬಂದಿರುವ ರಾಜೇಶ್ ಶೆಟ್ಟಿ ರವರು ಕಳೆದ ಹಲವು ವರ್ಷಗಳಿಂದ ಗೋವಾದ ವಿವಿಧ ಕನ್ನಡ ಶಾಲೆಗಳಿಗೆ ಪಠ್ಯ-ಪುಸ್ತಕ ವಿತರಣೆ ಮಾಡುವ ಮೂಲಕ ಕನ್ನಡಿಗ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕೆಂದು ಶೃಮಿಸುತ್ತಿರುವ ಕನ್ನಡಿಗರಾಗಿದ್ದಾರೆ. ಇಷ್ಟೇ ಅಲ್ಲದೆಯೇ ಕನ್ನಡಿಗರಿಗೆ ತೊಂದರೆಯಾದಾಗ ನಿರ್ಭಯವಾಗಿ ಕನ್ನಡಿಗರ ಪರ ಧ್ವನಿಯೆತ್ತುತ್ತಲೇ ಬಂದಿರುವ ಇವರು ಸಾಂಕೋಲಾ ಜಿಪಂ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಗೋವಾದ ಹಲವು ಪಂಚಾಯತ ಕ್ಷೇತ್ರಗಳು ಕನ್ನಡಗರೇ ನಿರ್ಣಾಯಕರಾಗಿರುವ ಕ್ಷೇತ್ರಗಳಾಗಿವೆ. ಅಂತೆಯೇ ವಾಸ್ಕೊ ಸಾಂಕೋಲಾ ಕ್ಷೇತ್ರವೂ ಕೂಡ ಹೌದು. ಈ ಕ್ಷೇತ್ರದಲ್ಲಿ ಸುಮಾರು 30,000 ಮರಗಳಿದ್ದರೆ ಈ ಪೈಕಿ 15000 ಕನ್ನಡಿಗರ ಮತಗಳೇ ಇವೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಕನ್ನಡಿಗರು ಯಾರನ್ನು ಬೆಂಬಲಿಸುತ್ತಾರೆಯೋ ಅವರೇ ಈ ಕ್ಷೇತ್ರದಲ್ಲಿ ಆಯ್ಕೆಯಾಗುವುದು ಖಚಿತ ಎಂಬುದು ಬಹುಚರ್ಚಿತ ವಿಷಯವಾಗಿದೆ. ಹೀಗಿರುವಾಗ ಪ್ರಸಕ್ತ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಕನ್ನಡಿಗರಾದ ರಾಜೇಶ್ ಶೆಟ್ಟಿ ರವರು ಸ್ಫರ್ಧಿಸಿರುವುದರಿಂದ ಈ ಕ್ಷೇತ್ರದಲ್ಲಿ ತೀವ್ರ ಸ್ಫರ್ಧೆ ಏರ್ಪಟ್ಟಿದೆ. ಪಕ್ಷೇತರರಾಗಿ ಸ್ಫರ್ಧಿಸಿರುವ ರಾಜೇಶ್ ಶೆಟ್ಟಿ ರವರು ಇತರ ಪಕ್ಷಗಳ ಅಭ್ಯರ್ಥಿಗಳಿಗೆ ನೇರ ಸ್ಫರ್ಧೆಯೊಡ್ಡಿದ್ದಾರೆ. ಕನ್ನಡಿಗರೇ ನಿರ್ಣಾಯಕರಾಗಿರುವ ಸಾಕೋಲಾ ಕ್ಷೇತ್ರದಲ್ಲಿ ರಾಜೇಶ್ ಶೆಟ್ಟಿ ರವರು ಬಹುಮತ ಪಡೆದು ಜಯಶಾಲಿಯಾಗುವುದು ನಿಶ್ಚಿತ ಎಂಬ ಮಾತು ಕೇಳಿ ಬರುತ್ತಿದೆ.

ಗೋವಾದಲ್ಲಿ ಕೆಲ ವಿಧಾನಸಭಾ ಕ್ಷೇತ್ರಗಳೂ ಕೂಡ ಕನ್ನಡಿಗರ ನಿರ್ಣಾಯಕ ಮತಗಳನ್ನು ಹೊಂದಿವೆ. ಇದರಿಂದಾಗಿ ಗೋವಾ ಕನ್ನಡಿಗರು ಮನಸ್ಸು ಮಾಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಒಂದೆರಡು ಕನ್ನಡಿಗ ಶಾಸಕರು ವಿಧಾನಸಭೆ ಪ್ರವೇಶಿಸಿದರೂ ಆಶ್ಚರ್ಯವೇನಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ರಾಜೇಶ್ ಶೆಟ್ಟಿ ರವರು ಸ್ಫರ್ಧಿಸಿರುವುದು ಮೊದಲ ಹಂತವಾಗಿದೆ. ರಾಜೇಶ್ ಶೆಟ್ಟಿ ರವರ ಜಯ ಖಚಿತ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ.