ಸುದ್ಧಿಕನ್ನಡ ವಾರ್ತೆ
ಪಣಜಿ: ಥೈಲ್ಯಾಂಡ್ ನಲ್ಲಿ ಬಂಧನಕ್ಕೊಳಗಾದ ಗೋವಾದ ಬರ್ಚ ಬೈ ರೋಮಿಯೊ ಲೆನ್ ನೈಟ್ ಕ್ಲಬ್ ನ ಮಾಲೀಕರಾದ ಗೌರವ ಲೂಥ್ರಾ ಹಾಗೂ ಸೌರಭ್ ಲೂಥ್ರಾ ರವರನ್ನು ಥೈಲ್ಯಾಂಡ್ ಪೋಲಿಸರು ಬಂಧಿಸಿದ್ದು ಇವರಿಬ್ಬರ ಪಾಸ್ ಪೋರ್ಟನ್ನು ಪೋಲಿಸರು ವಷಪಡಿಸಿಕೊಂಡಿದ್ದಾರೆ. ಇವರಿಬ್ಬರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಿದ್ದಾರೆ.

ಗೋವಾದ ಹಡಪಡೆಯಲ್ಲಿರುವ ಲೂಥ್ರಾ ಸಹೋದರರ ನೈಟ್ ಕ್ಲಬ್ ನಲ್ಲಿ ಕಳೆದ ಶನಿವಾರ ರಾತ್ರಿ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆ ಸಂಭವಿಸಿ ಕೆಲವೇ ಘಂಟೆಯಲ್ಲಿ ಲೂಥ್ರಾ ಸಹೋದರರು ಥೈಲ್ಯಾಂಡ್ ಗೆ ಪಲಾಯನಗೈದಿದ್ದರು. ಆರೋಪಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹುಡುಕಲು ಇಂಟರ ಪೋಲ್ ಮಂಗಳವಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿತ್ತು.

ಲೂಥ್ರಾ ಸಹೋದರರು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಅನಿರೀಕ್ಷಿತ ಬಂಧನದಿಂದ ರಕ್ಷಣೆ ಕೋರಿದ್ದರು. ಆದರೆ ನ್ಯಾಯಾಲಯವು ಅವರಿಗೆ ಯಾವುದೇ ತಕ್ಷಣದ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿತ್ತು.