ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿ ಕಳೆದ ಶನಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ 25 ಜನ ಸಾವನ್ನಪ್ಪಿದ್ದರು. ಈ ದುರ್ಘಟನೆಯ ನಂತರ ಗೋವಾ ಸರ್ಕಾರ ಎಚ್ಚೆತ್ತುಕೊಂಡಿದೆ. ಪರವಾನಗಿ ಅವಧಿ ಮುಕ್ತಾಯಗೊಂಡಿದ್ದ ಎರಡು ಕ್ಯಾಸಿನೊಗಳ  (Casino) ಪರವಾನಗಿಯನ್ನೇ ಸರ್ಕಾರ ರದ್ಧುಗೊಳಿಸಿದೆ.

ಬಿಗ್ ಬಿ ಲಿಜರ್  LLP  ಹಾಗೂ ಮ್ಯಾಚೊಸ್ ಎಂಟರಟೆನಮೆಂಟ್ ಪ್ರ್ಯ.ಲಿ ಈ ಎರಡೂ ಕಂಪನಿಗಳ ಕ್ಯಾಸಿನೊ ಪರವಾನಗಿಯನ್ನು ಸರ್ಕಾರ ರದ್ಧುಗೊಳಿಸಿದೆ.

ಬಿಗ್ ಬಿ ಲಿಜರ್ LLP  ಹಡಪಡೆ ನಾಗೋವಾ ಪಂಚತಾರಾ ಹೋಟೆಲ್ ನಲ್ಲಿ ರಿಯೋ ರೋಯಲ್ ಇಲೆಕ್ಟ್ರಾನಿಕ್ ಅಮ್ಯೂಸಮೆಂಟ್ ಗೇಮ್ಸ ಮಷಿನ್ ಅಳವಡಿಸಲು ಸರ್ಕಾರ ಅನುಮತಿ ನೀಡಿತ್ತು. ಇದಕ್ಕಾಗಿ ಪ್ರತಿವರ್ಷ ಪರವಾನಗಿ ವಿಸ್ತರಣೆ ಹಾಗೂ ಶುಲ್ಕ ಭರಿಸುವಂತೆ ಸರ್ಕಾರ ಸೂಚಿಸಿತ್ತು. ಆದರೆ 1 ಏಪ್ರಿಲ್ 2024 ರಿಂದ 31 ಮಾರ್ಚ 2025 ರ ವರೆಗೆ 3 ಕೋಟಿ ರೂ ಬಾಕಿ ಹಾಗೂ 1 ಏಪ್ರಿಲ್ 2025 ರಿಂದ 31 ಮಾರ್ಚ 2026 ರವರೆಗೆ 11 ಕೋಟಿ ರೂ ಶುಲ್ಕ ಪಾವತಿಸದ ಕಾರಣ ಈ ಕ್ಯಾಸಿನೊ ಪರವಾನಗಿಯನ್ನು ಸರ್ಕಾರ ರದ್ಧುಗೊಳಿಸಿದೆ.

ಅಂತೆಯೇ ಮ್ಯಾಚೊಸ್ ಎಂಟರಟೈನಮೆಂಟ್ ಪ್ರೈ.ಲಿ. ಕಂಪನಿಯಿಂದ ಕಲಂಗುಟ್ ನಲ್ಲಿ ಕ್ಯಾಸಿನೊ ನಡೆಸಲು 1 ಏಪ್ರಿಲ್ 2025 ರಿಂದ 31 ಮಾರ್ಚ 2026 ರವರೆಗೆ 22 ಕೋಟಿ ಶುಲ್ಕ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ಯಾಸಿನೊ ಪರವಾನಗಿಯನ್ನು ಸರ್ಕಾರ ರದ್ಧುಗೊಳಿಸಿದೆ.
ಬಿಗ್ ಬಿ ಲೀಜರ್ ಎಲ್ ಎಲ್ ಪಿ ಕ್ಯಾಸಿನೊದಿಂದ 14 ಕೋಟಿ ಬಾಕಿ ಹಾಗೂ ಮ್ಯಾಚೊಸ್ ಎಂಟರಟೈನಮೆಂಟ್ ಪ್ರೈ.ಲಿ ಕ್ಯಾಸಿನೊದಿಂದ 22 ಕೋಟಿ ಬಾಕಿ ಉಳಿಸಿದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗೋವಾದ ಹಡಪಡೆಯ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ಅವಘಡ ಘಟನೆಯ ನಂತರ ಸರ್ಕಾರ ಗೋವಾ ರಾಜ್ಯದಲ್ಲಿ ನೈಟ್ ಕ್ಲಬ್ ಮತ್ತು ಕ್ಯಾಸಿನೊ ಗಳಂತಹ ವ್ಯವಹಾರಗಳ ಮೇಲೆ ಕಠಿಣ ಕ್ರಮ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇಂತಹ ಉದ್ಯೋಗಗಳ ಪರವಾನಗಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದೆ.