ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ದಿ. ಮನೋಹರ್ ಪರೀಕರ್ ರವರ 70 ನೇಯ ಜಯಂತಿಯ ಅಂಗವಾಗಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ರವರ ವಿಶೇಷ ವ್ಯಾಖ್ಯಾನ ಕಾರ್ಯಕ್ರಮವನ್ನು ಗೋವಾದ ಮಾಪ್ಸಾದಲ್ಲಿ ಆಯೋಜಿಸಲಾಗಿದೆ.
ಸಂಘ ಶತಾಬ್ದಿ ವರ್ಷದ ಅಂಗವಾಗಿ ಸಂಸದ ತೇಜಸ್ವಿ ಸೂರ್ಯ ರವರ ವಿಶೇಷ ವ್ಯಾಖ್ಯಾನ ಕಾರ್ಯಕ್ರಮವನ್ನು ಗೋವಾದ ಮಾಪ್ಸಾದ ಶ್ರೀಹನುಮಾನ ನಾಟ್ಯಗೃಹದಲ್ಲಿ ಇದೇ ಡಿಸೆಂಬರ್ 13 ರಂದು ಸಂಜೆ 4.45 ಕ್ಕೆ ಆಯೋಜಿಸಲಾಗಿದೆ. ಅಂದು ಸಂಸದ ತೇಜಸ್ವಿ ಸೂರ್ಯ ರವರ ವಿಶೇಷ ವ್ಯಾಖ್ಯಾನ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಗೋವಾದಲ್ಲಿರುವ ಕನ್ನಡಿಗರು, ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
