ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯ ನೈಟ್ ಕ್ಲಬ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಗಡದಲ್ಲಿ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನೈಟ್ ಕ್ಲಬ್ ಮಾಲೀಕರಾದ ಗೌರವ ಲುಥರಾ ಹಾಗೂ ಸೌರಭ ಲುಥರಾ ರವರ ವಿರುದ್ಧ ಲಾಕ್ ಔಟ್ ನೋಟಿಸ್( Lock out notice) ಜಾರಿಗೊಳಿಸಿದ್ದಾರೆ.

ಇವರಿಬ್ಬರ ಬಂಧನಕ್ಕಾಗಿ ಪೋಲಿಸರು ದೆಹಲಿಗೆ ತೆರಳಿದ್ದರು. ಇವರಿಬ್ಬರೂ ವಿದೇಶಕ್ಕೆ ಪಲಾಯನಗೈಯ್ಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಇವರಿಬ್ಬರೂ ಈಗಾಗಲೇ ವಿದೇಶಕ್ಕೆ ಪಲಾಯನಗೈದಿದ್ದಾರೆ ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಈ ಇಬ್ಬರೂ ನೈಟ್ ಕ್ಲಬ್ ಮಾಲೀಕರು ಕ್ಲಬ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಮರುದಿನ ಅಂದರೆ ಭಾನುವಾರ ಬೆಳಿಗ್ಗೆ 5.30 ರ ವಿಮಾನದಲ್ಲಿ ಈ ಇಬ್ಬರೂ ಫುಕೇತ್ ದೇಶಕ್ಕೆ (Phuket) ಪರಾರಿಯಾಗಿದ್ದಾರೆ ಎಂಬ ಮಾಹಿತಿ ಗೋವಾ ಪೋಲಿಸರಿಗೆ ಲಭ್ಯವಾಗಿದೆ.