ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯ ಡಾನ್ಸ ಕ್ಲಬ್ ನಲ್ಲಿ (Goa Night Club) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಝಾಕಿಸ್ತಾನದ ನರ್ತಕಿ ಕ್ರಿಸ್ಟಿನಾ (Dancer Kristina from Kazakhstan) ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಲಬ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದ ಭಯಾನಕತೆಯ ಕುರಿತು ನರ್ತಕಿ ಕ್ರಿಸ್ಟಿನಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡ ತಕ್ಷಣ ಕ್ಲಬ್ ನಿಂದ (Night club) ಜನರು ಓಡಲು ಪ್ರಾರಂಭಿಸಿದರು. ಕ್ಲಬ್ ನಲ್ಲಿದ್ದ ಸಿಬ್ಬಂಧಿ ಮತ್ತು ಜನರು ಪರಸ್ಪರ ಸಹಾಯ ಮಾಡಿದರು. ನನ್ನ ಮೊದಲ ಆಲೋಚನೆ ನನ್ನ ಬಟ್ಟೆ ಬದಲಾಯಿಸುವ ಕೋಣೆಗೆ ಹೋಗಬೇಕು ಎಂದಿತ್ತು. ಆದರೆ ಅಲ್ಲಿನ ಸಿಬ್ಬಂಧಿ ಸದಸ್ಯರು ನನ್ನನ್ನು ತಡೆದು ಅಲ್ಲಿಗೆ ಹೋಗಬೇಡಿ ಎಂದು ಹೇಳಿದರು. ಈ ಒಂದು ನಿರ್ಧಾರ ಮಾತ್ರ ನನ್ನ ಜೀವ ಉಳಿಸಿತು. ನಾನು ಮನೆಗೆ ಬಂದು ಮಗಳನ್ನು ತಬ್ಬಿಕೊಂಡಾಗ ಜೀವಂತವಾಗಿದ್ದಿದ್ದಕ್ಕಾಗಿ ದೇವರಿಗೆ ಧನ್ಯವಾದ (Thank God)ಹೇಳಿದೆ. ಆ ದಿನ ಅಗ್ನಿ ಅವಘಡದ ಸಂದರ್ಭದಲ್ಲಿ ಅದು ನನ್ನ ಎರಡನೇಯ ಪ್ರದರ್ಶನವಾಗಿತ್ತು ಎಂದು ಆ ಭೀಕರ ಘಟನೆಯ ಸಂದರ್ಭವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಪ್ರತ್ಯಕ್ಷದರ್ಶಿಗಳು…
ಕರ್ನಾಟಕದಿಂದ ವಾರಾಂತ್ಯದ ಪ್ರವಾಸಕ್ಕೆ ಬಂದಿದ್ದ ಕಾರ್ಪೊರೇಟ್ ಉದ್ಯೋಗಿಗಳ ಗುಂಪಿನ ಪ್ರತ್ಯಕ್ಷದರ್ಶಿಗಳು ಕ್ಲಬ್ ನೊಳಗಿನ ಭಯಾನಕ ಪರಿಸ್ಥಿತಿಯನ್ನು (Horrible situation inside the club) ವಿವರಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಎಲ್ಲ ಲೈಟ್ ಗಳು ಆರಿಹೋದವು. ಸಂಪೂರ್ಣವಾಗಿ ಕತ್ತೆಯಾಗಿತ್ತು. ಎಲ್ಲೆಡೆ ಹೊಗೆ ತುಂಬಿಕೊಂಡಿತ್ತು. ಜನರು ಹೊರಬರಲು ಪ್ರಯತ್ನಿಸುತ್ತಿದ್ದರು. ತಳ್ಳಾಟ…ನೂಕಾಟ ನಡೆಯುತ್ತಿತ್ತು. ಕೆಲವು ಸ್ಫೋಟಕ ಶಬ್ದ ಕೇಳಿಬಂತು. ಕಾಲ್ತುಳಿತ ಸಂಭವಿಸಲಿದೆ ಎಂದು ನಾನು ಭಾವಿಸಿದ್ದೆ. ಅದೃಷ್ಠವಶಾತ್ ನಾವು ಪಾರಾದೆವು ಎಂದು ಕೇಳಿದ್ದಾರೆ.
ಉತ್ತರ ಗೋವಾದ ಹಡಪಡೆಯಲ್ಲಿ ಬಿರ್ಚ ಬೈ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ದುರ್ಘಟನೆಯಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ನೈಟ್ ಬಾರ್ ನಲ್ಲಿ ಸುಮಾರು 200 ಜನರಿದ್ದರು ಎಂಬ ಆತಂಕಕಾರಿ ವಿಷಯ ಕೂಡ ಬೆಳಕಿಗೆ ಬಂದಿದೆ.
