ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿನ “ಬರ್ಚಬಾಯ್ ರೋಮಿಯೊ ಲೆನ್” ನೈಟ್ ಕ್ಲಬ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಜೀವ ದಹನವಾದ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ತನಿಖಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಹಣಜುಣ ಪೋಲಿಸರು ಕ್ಲಬ್ ನ ನಾಲ್ವರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕ್ಲಬ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

 

ಕ್ಲಬ್ ನಲ್ಲಿ ದುರ್ಘಟನೆ ಸಂಭವಿಸುವ ಸಂದರ್ಭದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಳ್ಲಿ ವೈರಲ್ ಆಗಿದೆ. ಕ್ಷಣಾರ್ಧದಲ್ಲಿ ಬೆಂಕಿ ರೌದ್ರರೂಪ ತಾಳಿರುವುದು ಕೂಡ ವೀಡಿಯೊದಲ್ಲಿ ಕಂಡುಬರುತ್ತಿದೆ. ಈ ಭೀಕರ ಘಟನೆಯಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಕೆಲವು ಬೆಂಕಿಯಲ್ಲಿ ಬೆಂದುಹೋಗಿದ್ದಾರೆ. ಸಾವನ್ನಪ್ಪಿರುವವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ ಎನ್ನಲಾಗಿದೆ.

ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವವರಲ್ಲಿ ಹಲವು ಪ್ರವಾಸಿಗರು ಒಳಗೊಂಡಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಈ ಭೀಕರ ಘಟನೆಯು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಗೋವಾ ರಾಜ್ಯ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದೆ.

ಹಣಜುಣ ಪೋಲಿಸರು ನೈಟ್ ಕ್ಲಬ್ ಮಾಲೀಕ ಸೌರಭ್ ಲುಥರಾ, ಗೌರವ ಲುಥರಾ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೋಲಿಸರು ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ದುರಂತದಲ್ಲಿ ಸಾವನ್ನಪ್ಪಿರುವ ಕೆಲವರ ಗುರುತು ಪತ್ತೆಯಾಗಿದೆ
ಮೋಹಿತ್ ಮುಂದಾ (18,ಝಾರ್ಖಂಡ್), ಪ್ರದೀಪ ಮಹತೊ(22,ಝಾರ್ಖಂಡ್), ಬಿನೋದ ಮಹತೊ(19) ಝಾರ್ಖಂಡ್), ರಾಹುಲ್ ತಂಟಿ(ಅಸ್ಸಾಂ), ಸತೀಶ್ ಸಿಂಗ್ ರಾಣಾ (26,ಉತ್ತರಾಖಂಡ).