ಸುದ್ಧಿಕನ್ನಡ ವಾರ್ತೆ
ಶನಿವಾರ ಮಧ್ಯರಾತ್ರಿ ಗೋವಾದ ಹಡಪಡೆಯಲ್ಲಿರುವ ನೈಟ್ ಕ್ಲಬ್ ನಲ್ಲಿ ( Night club) ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ 25 ಜನರು ಸಜೀವ ದಹನವಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಆದರೆ ಈ ನೈಟ್ ಕಲ್ಲಬ್ ನಲ್ಲಿದ್ದ ಕೆಲವು ಪ್ರತ್ಯಕ್ಷದರ್ಶಿಗಳು ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಉತ್ತರ ಗೋವಾದ ಅರ್ಪೊರಾ ಗ್ರಾಮದಲ್ಲಿರುವ ನೈಟ್ ಕ್ಲಬ್ ನಲ್ಲಿ ಶನಿವಾರ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದಾಗ ಅಲ್ಲಿನ ನೃತ್ಯ ಮಹಡಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರಿದ್ದರು. ಆದರೆ ಸ್ಪೋಟ ಸಂಭವಿಸಿದಾಗ ಕೆಲವರು ಅಡುಗೆ ಮನೆ ಕಡೆ ಓಡಿಹೋಗಿ ಅಲ್ಲಿ ಸಿಲುಕಿಕೊಂಡರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.There were more than 100 people on the dance floor
ಗೋವಾ ರಾಜಧಾನಿ ಪಣಜಿಯಿಂದ 25 ಕಿಮಿ ದೂರದಲ್ಲಿರುವ ಅರ್ಪೊರಾ ಗ್ರಾಮದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಆದರೆ ಕೆಲವು ಪ್ರತ್ಯಕ್ಷ ದರ್ಶಿಗಳು ಮೊದಲು ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆಘಾತಕಾರಿ ವಿಯಯ ಹೇಳಿದ್ದಾರೆ.

ನಡೆದಿದ್ದೇನು…?
ಬೆಂಗಿ ಹೊತ್ತಿಕೊಂಡಾಗ ಅಲ್ಲಿದ್ದ ಹೈದರಾಬಾದ್ ಪ್ರವಾಸಿಯೋರ್ವರು ಮಾಹಿತಿ ನೀಡಿದ್ದು- ಅಗ್ನಿ ಅವಘಡ ಸಂಭವಿಸುವ ಸಂದರ್ಭದಲ್ಲಿ ಅಲ್ಲಿ ಅವ್ಯವಸ್ಥೆಯಿಂದ ಕೂಡಿತ್ತು ಎಂದು ಹೇಳಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ನಾವು ಕ್ಲಬ್ ನಿಂದ ಹೊರಗೆ ಓಡಿ ಬಂದೆವು. ಆದರೆ ಕೆಲವೇ ಕ್ಷಣದಲ್ಲಿ ಇಡೀ ಕ್ಲಬ್ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಭೀಕರ ದೃಶ್ಯವನ್ನು ಕಂಡೆವು. ವಾರಾಂತ್ಯವಾಗಿದ್ದರಿಂದ ನೈಟ್ ಕ್ಲಬ್ ತುಂಬಿತ್ತು. ನೃತ್ಯ ಮಹಡಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಹೊತ್ತಿಕೊಂಡ ನಂತರ ಕೆಲ ಪ್ರವಾಸಿಗರು ಕೆಳಕ್ಕೆ ಓಡಿಹೋದರು. ಅಲ್ಲಿ ಕೆಲ ಪ್ರವಾಸಿಗರು ಕ್ಲಬ್ ಉದ್ಯೋಗಿಗಳೊಂದಿಗೆ ಬೆಂಕಿಯಲ್ಲಿ ಸಿಲುಕಿಕೊಂಡರು. ಹೆಚ್ಚಿನ ಜನರು ಕ್ಲಬ್ ನಿಂದ ತಪ್ಪಿಸಿಕೊಂಡು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಅಗ್ನಿ ಅವಘಡದ ಬಗ್ಗೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ- ಕ್ಲಬ್ ಗೆ ಹೋಗಲು ಕಿರಿದಾದ ಮಾರ್ಗದಿಂದಾಗಿ ಅಗ್ನಿಶಾಮಕ ದಳದ ವಾಹನವನ್ನು ಸುಮಾರು 400 ಮೀಟರ್ ದೂರದಲ್ಲಿ ನಿಲ್ಲಿಸಬೇಕಾಯಿತು. ಮೃತರಲ್ಲಿ ಕೆಲವು ನೆಲಮಾಳಿಗೆಯಲ್ಲಿ ಸಿಲುಕಿಕೊಂಡರು, ಕೆಲವು ಉಸಿರುಗಟ್ಟಿ ಸಾವನ್ನಪ್ಪಿದರು.
ಬೆಂಕಿ ವೇಗವಾಗಿ ಹರಡಲು ಕಾರಣ…
ಈ ಕ್ಲಬ್ ನ್ನು ಹೆಚ್ಚಾಗಿ ತಾಳೆ ಎಲೆಗಳಂತಹ ತಾತ್ಕಾಲಿಕ ಮತ್ತು ಬೇಗನೇಯ ಬೆಂಕಿ ಹೊತ್ತಿಕೊಳ್ಳುವಂತಹ ವಸ್ರತುಗಳಿಂದ ನಿರ್ಮಿಸಲಾಗಿದ್ದರಿಂದ ಇಡೀ ಕ್ಲಬ್ ಗೆ ಕೂಡಲೇ ಬೆಂಕಿ ಹೊತ್ತು ಉರಿಯಲು ಆರಂಭಿಸಿತು. ಕೆಳ ಮಹಡಿಯ ಅಡಿಗೆ ಮನೆಯಲ್ಲಿ ಕಾಳಿ ಓಡಾಡದ ಕಾರಣ ಅಲ್ಲಿಗೆ ಓಡಿಹೋಗಿ ಸಿಲುಕಿಕೊಂಡವರು ಹಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನೃತ್ಯ ಮಹಡಿಯಲ್ಲಿಯೇ ಕಾಣಿಸಿಕೊಂಡ ಬೆಂಕಿ…?
ಪ್ರತ್ಯಕ್ಷ ದರ್ಶಿ ನೀಡಿರುವ ಮಾಹಿತಿಯ ಅನುಸಾರ- ನೃತ್ಯ ಮಹಡಿಯಲ್ಲಿ ಎಲ್ಲರೂ ನೃತ್ಯ ಮಾಡುತ್ತಿರುವಾಗ ಮೇಲಿಂದ ಬೆಂಕಿ ಉಂಡೆಯಂತೆ ಬೆಂಕಿ Fire ಉದುರಲು ಆರಂಭಿಸಿದೆ. ಅಲ್ಲಿದ್ದ ಕಲಾವಿದರು ಬೆಂಕಿಗೆ ನೀರು ಚೆಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಕೂಡ ಕೆಲವೇ ಸೆಕೆಂಡುಗಳಲ್ಲಿ ಇಡೀ ಕ್ಲಬ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಈ ಅಗ್ನಿ ಅವಘಡಕ್ಕೆ ಸಿಲಿಂಡರ್ ಸ್ಪೋಟ ಕಾರಣವೇ ಅಥವಾ ಇನ್ಯಾವ ಸ್ಪೋಟಕ ವಸ್ತು ಇತ್ತೇ…? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಗೋವಾದಲ್ಲಿ ನಡೆದಿರುವ ಈ ಅಗ್ನಿ ಅವಘಡದಿಂದಾಗಿ ನೈಟ್ ಕ್ಲಬ್ ಗಳ ಬಗ್ಗೆ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಗೋವಾ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೊಸ ವರ್ಷ ಸಂಭ್ರಮಾಚರಣೆಗೆ (New Year celebration) ಕೆಲವೇ ದಿನ ಬಾಕಿ ಇದೆ. ಇದೀಗ ಗೋವಾಕ್ಕೆ ಆಗಮಿಸುವ ಪ್ರಶ್ನೆಗರಿಗೆ ಇಲ್ಲಿ ಸುರಕ್ಷತೆಯ ಪ್ರಶ್ನೆ ಎದುರಾಗಿದೆ.
