ಸುದ್ಧಿಕನ್ನಡ ವಾರ್ತೆ
ನವದೆಹಲಿ: ಇಂಡಿಗೋ ಏರ್ಲೈನ್ಸ ಸತತವಾಗಿ ವಿಮಾನ ಹಾರಾಟ ರದ್ದಾಗುತ್ತಿರುವುದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ. ನಾಗರೀಕ ವಿಮಾನಯಾನ ಮಂತ್ರಾಲಯವು ಶನಿವಾರ ಇಂಡಿಗೋಕ್ಕೆ ಸ್ಪಷ್ಠ ಆದೇಶವೊಂದನ್ನು ನೀಡಿದೆ. ರದ್ಧಾಗಿರುವ ಎಲ್ಲ ಟಿಕೇಟ್ ಗಳ ಹಣವನ್ನು ಭಾನುವಾರ ಸಂಜೆಯ ಒಳಗೆ ಸಂಬಂಧಪಟ್ಟ ಪ್ರಯಾಣಿಕರಿಗೆ ರಿಫಂಡ್ ಮಾಡುವಂತೆ ಆದೇಶ ಹೊರಡಿಸಿದೆ. ಪ್ರಯಾಣಿಕರಿಗೆ ಹಣವನ್ನು ರಿಫಂಡ ಮಾಡುವಲ್ಲಿ ವಿಳಂಭ ಮಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಶುಕ್ರವಾರ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಇಂಡಿಗೊ ವಿಮಾನ ಹಾರಾಟ ರದ್ದಾಗಿತ್ತು. ಶನಿವಾರವೂ ಕೂಡ ಇದೇ ಪರಿಸಿಸ್ಥಿತಿ ಮುಂದುವರೆದಿದ್ದು ಇಂದು ಕೂಡ ದೇಶಾದ್ಯಂತ ಇಂಡಿಗೋದ ಹಲವು ವಿಮಾನಗಳು ರದ್ದಾಗಿತ್ತು. ಇದರಿಂದಾಗಿ ಪ್ರಯಾಣಿಕರು ಭಾರಿ ತೊಂದರೆ ಅನುಭವಿಸುವಂತಾಗಿದೆ. ಟಿಕೇಟ್ ರದ್ಧಾಗಿರುವ ಎಲ್ಲ ಬಾಕಿ ಹಣವನ್ನು ಪ್ರಯಾಣಿಕರ ಖಾತೆಗೆ ಭಾನುವಾರ ಸಂಜೆಯ ಒಳಗೆ ರಿಫಂಡ್ ಮಾಡುವಂತೆ ಇಂಡಿಗೊ ಕಂಪನಿಗೆ ಎಚ್ಚರಿಕೆ ನೀಡಲಾಗಿದೆ.
ಗೋವಾದಲ್ಲಿಯೂ ಪರಿಣಾಮ…
ಗೋವಾದ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಶನಿವಾರ ಇಂಡಿಗೊ ಕಂಪನಿಯ 14 ವಿಮಾನಗಳು ರದ್ಧಾಗಿದ್ದರಿಂದ ಹಲವು ಪ್ರವಾಸಿಗರು ತೊಂದರೆಗೆ ಒಳಗಾಗಿದ್ದಾರೆ. ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಇದರಿಂದಾಗಿ ಪ್ರವಾಸೋದ್ಯಮದ ಮೇಲೂ ಕೂಡ ಪೆಟ್ಟು ಬೀಳುವಂತಾಗಿದೆ. ಶುಕ್ರವಾರ ಕೂಡ ಗೋವಾ ದಾಬೋಲಿಂ ವಿಮಾನ ನಿಲ್ದಾಣದಲ್ಲಿ 38 ಇಂಡಿಗೊ ವಿಮಾನದ ಪೈಕಿ 31 ವಿಮಾನ ರದ್ದಾಗಿತ್ತು.
