ಸುದ್ಧಿಕನ್ನಡ ವಾರ್ತೆ
ಪಣಜಿ: ಅಪರಾಧಗಳ ತನಿಖೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಗೋವಾದ ಬಿಚೋಲಿ ಪೋಲಿಸ್ ಠಾಣೆ ದೇಶದಲ್ಲಿನ ಉತ್ಕøಷ್ಠ ಪೋಲಿಸ್ ಠಾಣೆಗಳಲ್ಲಿ 5 ಸ್ಥಾನ ಪಡೆದುಕೊಂಡಿದೆ. ಕೇಂದ್ರ ಗೃಹ ವ್ಯವಹಾರ ಮಂತ್ರಾಲಯದ ತಂಡವೊಂದು ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಸ್ವತಂತ್ರವಾಗಿ ದೇಶದ ಎಲ್ಲ ಪೋಲಿಸ್ ಠಾಣೆಗಳ ಕಾರ್ಯವೈಖರಿ ಸರ್ವೆ ನಡೆಸಿದ್ದರು. ಈ ಸರ್ವೆಯಲ್ಲಿ ದೇಶದಲ್ಲಿನ ಎಲ್ಲ ಪೋಲಿಸ್ ಠಾಣೆಗಳಲ್ಲಿ ಅಪರಾಧಗಳ ತನಿಖೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಒಟ್ಟೂ 10 ಪೋಲಿಸ್ ಠಾಣೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಗೋವಾದ ಬಿಚೋಲಿಂ ಪೋಲಿಸ್ ಠಾಣೆ 5 ನೇಯ ಸ್ಥಾನದಲ್ಲಿದೆ.
ದೇಶದ ಉತ್ಕøಷ್ಠ ಪೋಲಿಸ್ ಠಾಣೆಯಲ್ಲಿ 5 ನೇಯ ಸ್ಥಾನ ಪಡೆದಿರುವ ಗೋವಾದ ಬಿಚೋಲಿಯ ಏಕೈಕ ಪೋಲಿಸ್ ಠಾಣೆಯಾಗಿದೆ. ಕಳೆದ ಆರು ತಿಂಗಳಲ್ಲಿ ಬಿಚೋಲಿ ಪೋಲಿಸ್ ಠಾಣೆಯು ಮಾದಕಪದಾರ್ಥ ಪ್ರಕರಣ, ಅಪಹರಣ, ಲೈಂಗಿಕ ಅತ್ಯಾಚಾರ, ಹೀಗೆ ವಿವಿಧ ಅಪರಾಧಗಳ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟೇ ಅಲ್ಲದೆಯೇ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಕೂಡ ಈ ಪೋಲಿಸ್ ಠಾಣೆ ಯಶಸ್ವಿಯಾಗಿದೆ. ಈ ಪೋಲಿಸ್ ಠಾಣೆಯಲ್ಲಿ ಚಾಯಿಲ್ಡ ಫ್ರೆಂಡ್ಲಿ ರೂಂ, ಜಿಮ್, ಸೇರಿದಂತೆ ದರ್ಜಾತ್ಮಕ ಸೌಲಭ್ಯವನ್ನು ಬಿಚೋಲಿಂ ಪೋಲಿಸ್ ಠಾಣೆ ಒಳಗೊಂಡಿದೆ.
ದೆಹಲಿಯ ಮಾಜಿಪುರ ಪೋಲಿಸ್ ಠಾಣೆ ಪ್ರಥಮ ಸ್ಥಾನ, ಪಹರಗಾಂವ(ಅಂಡಮಾನ್-ನಿಕೋಬಾರ್) ಹಾಗೂ ಕರ್ನಾಟಕದ ರಾಯಚೂರು ಪೋಲಿಸ್ ಠಾಣೆ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ, ಝಾರ್ಖಂಡ್ ನ ಚೌಕಾ ಪೋಲಿಸ್ ಠಾಣೆಯು 4 ನೇಯ ಸ್ಥಾನ ಪಡೆದುಕೊಂಡಿದೆ. ಅಂತೆಯೇ ಮೇಘಾಲಯ, ತೆಲಂಗಾಣ, ಪಾಂಡಿಚೇರಿ, ಮಧ್ಯಪ್ರದೇಶ, ಹಾಗೂ ರಾಜಸ್ಥಾನ ಪೋಲಿಸ್ ಠಾಣೆ ಉತ್ಕøಷ್ಠ ಪೋಲಿಸ್ ಠಾಣೆಯಲ್ಲಿ ಆಯ್ಕೆಯಾಗಿದೆ.
