ಸುದ್ದಿ ಕನ್ನಡ ವಾರ್ತೆ

ಬೆಳಗಾವಿ
ಪ್ರಸಕ್ತ ಸಾಲಿನ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠ ನೀಡುವ ಪ್ರತಿಷ್ಠಿತ ನುಡಿ ಶ್ರೀ ಪ್ರಶಸ್ತಿಗೆ ಆಯ್ಕೆಯಾದ ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗೋವಾ ರಾಜ್ಯದಲ್ಲಿ ಕನ್ನಡದ ಕ್ರಾಂತಿಯನ್ನೇ ಮಾಡಿದ ಡಾ. ಸಿದ್ದಣ್ಣ ಮೇಟಿ ಹಾಗೂ ನೀಲಮ್ಮ ಮೇಟಿ ಅವರಿಗೆ ನುಡಿ ಶ್ರೀ ಪ್ರಶಸ್ತಿ ಲಭಿಸಿರುವ ಪ್ರಯುಕ್ತ ಬೆಳಗಾವಿ ಲಕ್ಷ್ಮೀ ಟೆಕಡಿಯಲ್ಲಿ ಹುಕ್ಕೇರಿ ಗುರುತಾಂತೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ‌ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಡಾ. ಸಿದ್ದಣ್ಣ ಮೇಟಿ ಗೋವಾ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತ ಕನ್ನಡ ನಾಡು, ನುಡಿಗೆ ನಿರಂತರವಾಗಿ ಶ್ರಮಿಸಿ ಕನ್ನಡಿಗರ ರಕ್ಷಣೆಗೆ ನಿಂತಿರುವ ಅಪರೂಪದ ವ್ಯಕ್ತಿ ಎಂದರು.
ಡಾ. ಸಿದ್ದಣ್ಣ ಮೇಟಿ ಮಾಡುತ್ತಿರುವ ಕನ್ನಡ ಹೋರಾಟವನ್ನು ನೋಡುತ್ತಿದ್ದೇವೆ. ಇವರು ಮಾಡುತ್ತಿರುವ ಕಾರ್ಯಕ್ಕೆ ನಾಗನೂರು‌ ರುದ್ರಾಕ್ಷಿ ಮಠ ನುಡಿ ಶ್ರೀ ಪ್ರಶಸ್ತಿ ‌ನೀಡಿ ಗೌರವಿಸಿರುವುದು ನಿಜಕ್ಕೂ ಅಭಿನೀಯ ಎಂದರು.

ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಡಾ. ಸಿದ್ದಣ್ಣ ಮೇಟಿ ಮಾತನಾಡಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಂದರೆ ಕನ್ನಡದ ಸ್ವಾಮೀಜಿ ಎಂದೆ ಖ್ಯಾತಿಯಾಗಿದ್ದಾರೆ. ಗೋವಾ ರಾಜ್ಯದ ಯಾವುದೇ ಕನ್ನಡ ಪರ ಕಾರ್ಯಕ್ರಮ ನಡೆದರೆ ಅದಕ್ಕೆ ಹುಕ್ಕೇರಿ ಶ್ರೀಗಳು ಇರಲೇಬೇಕು. ಇದಕ್ಕೆ ಇವತ್ತು ನಾನು ಕನ್ನಡದ ಕೆಲಸ ಮಾಡುತ್ತಿದ್ದೇನೆ ಎಂದರೆ ಇದರ ಹಿಂದೆ ಹುಕ್ಕೇರಿ ಶ್ರೀಗಳ ಆಶೀರ್ವಾದವೇ ಕಾರಣ ಎಂದರು.
ಹುಕ್ಕೇರಿ ಶ್ರೀಗಳ ಸಂಕಲ್ಪಿಸಿದ ಕನ್ನಡ ಭವನ ನಿರ್ಮಾಣವಾಗಲು ಸಜ್ಜಾಗಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೋಟೆಯಂತಿರುವ ನಾಗನೂರು ರುದ್ರಾಕ್ಷಿ ಮಠ ನನಗೆ ಕನ್ನಡ ನುಡಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದರುವುದು ನಿಜಕ್ಕೂ ನಾನು ಪುಣ್ಯವಂತ ಎಂದರು.

ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠ ಹಾಗೂ ನಾಗನೂರು ರುದ್ರಾಕ್ಷಿ ಮಠ ಎಂದರೆ ಕನ್ನಡದ ಮಠವಾಗಿ ರಾಜ್ಯದಲ್ಲಿ ಗುರುತಿಸಲ್ಪಟ್ಟಿವೆ ಎಂದರು.
ಈ ಸಂದರ್ಭದಲ್ಲಿ ವೀರುಪಾಕ್ಷಯ್ಯ ಹಿರೇಮಠ, ವೀರೇಶ್ ಹಿರೇಮಠ, ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.