ಸುದ್ದಿ ಕನ್ನಡ ವಾರ್ತೆ
ಡಾಕ್ಟರ್ ಸಿದ್ದಣ್ಣ ಮೇಟಿ ಅವರು ಒಬ್ಬ ಕನ್ನಡದ ಕಾವಲಿಗ ಗೋವಾ ರಾಜ್ಯದಲ್ಲಿ ಕನ್ನಡಿಗರಿಗೆ ಕಾವಲಿಗರಾಗಿ ಕನ್ನಡದ ಸೇವೆ ಮಾಡುತ್ತಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಬೆಳಗಾವಿಯ ಲಕ್ಷ್ಮಿ ಟೆಕಡಿಯಲ್ಲಿರುವ ಹಿರೇಮಠದಲ್ಲಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಹೋರಾಟಗಾರ ಸಿದ್ದಣ್ಣ ಮೇಟಿ ಅವರಿಗೆ ಬೆಳಗಾವಿ ಡಾಕ್ಟರ್ ನಾಗನೂರ ಮಠದ ನುಡಿ ಶ್ರೀ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಡಾಕ್ಟರ್ ಸಿದ್ದಣ್ಣ ಮೇಟಿ , ಶ್ರೀಮತಿ ನಿಲ್ಲಮ್ಮ ಮೇಟಿ ದಂಪತಿಗಳಿಗೆ ಆಶಿರ್ವದಿಸಿ ಮಾತನಾಡುತ್ತಾ ಸಿದ್ದಣ್ಣ ಮೇಟಿ ಅವರ ಕನ್ನಡದ ಕೆಲಸ ಮನಗಂಡು ಶ್ರೀ ಮಠ ಅವರಿಗೆ ನುಡಿ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಇನ್ನಷ್ಟು ಹೆಚ್ಚಿನ ಕನ್ನಡದ ಕೆಲಸವನ್ನು ಮಾಡಲಿ ಎಂದು ಆಶಿರ್ವದಿಸಿದರು.
ಗುರು ಗೌರವ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಸಿದ್ದಣ್ಣ ಮೇಟಿ ಅವರು ಹುಕ್ಕೇರಿ ಹಿರೇಮಠ ನನ್ನ ಹೃದಯದಲ್ಲಿ ಲಿಂಗವಿದ್ದಂತೆ ಸುಮಾರು 20 ವರ್ಷಗಳಿಂದ ನನಗೆ ಶ್ರೀ ಗಳು ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ.ನನ್ನಲ್ಲಿ ಕನ್ನಡದ ಕಿಚ್ಚು ಹೆಚ್ಚಿಸಿದ್ದು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇವತ್ತು ನಾಗನೂರ ಮಠ ನುಡಿ ಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವ ಸಂತಸದ ಗಳಿಗೆಯಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನನ್ನನ್ನು ಮಠಕ್ಕೆ ಆಹ್ವಾನಿಸಿ ಆಶಿರ್ವಾದ ಮಾಡಿದ್ದು ನನಗೆ ಅತೀವ ಸಂತೋಷ ತಂದಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮಾತನಾಡಿ ಕನ್ನಡದ ಮಠವೆಂದರೆ ಅದು ಹುಕ್ಕೇರಿ ಹಿರೇಮಠ ಪ್ರತಿಯೊಬ್ಬ ಕನ್ನಡದ ಹೋರಾಟಗಾರರನ್ನು ಕರೆದು ಮಾರ್ಗದರ್ಶನವನ್ನು ಶ್ರೀ ಗಳು ಮಾಡುತ್ತಾ ಬಂದಿದ್ದಾರೆ.ಇವತ್ತು ಡಾಕ್ಟರ್ ಸಿದ್ದಣ್ಣ ಮೇಟಿ ಅವರು ಗೋವಾದಲ್ಲಿ ಕನ್ನಡದ ಸೇವೆ ಮಾಡಿರುವ ಹಿನ್ನೆಲೆಯಲ್ಲಿ ನಾಗನೂರ ಮಠ ನುಡಿ ಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಖುಷಿ ವಿಚಾರ ಎಂದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಬಡಾವಣೆಯ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ವಿರುಪಾಕ್ಷಯ್ಯ ನಿರಲಗಿಮಠ. ಸಮಾಜ ಸೇವಕರಾದ ವಿರೇಶ ಹಿರೇಮಠ ನಾಗರಾಜ .ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
