ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಇಂಡಿಗೋ ಏರ್ ಲೈನ್ಸ ನಲ್ಲಿ (Indigo) ನಡೆಯುತ್ತಿರುವ ಗೊಂದಲ ದೇಶಾದ್ಯಂತ ವಿಮಾನ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇದೇ ಗೊಂದಲ ಗೋವಾದ ದಾಬೋಲಿಂ ವಿಮಾನ ನಿಲ್ದಾಣದಲ್ಲಿಯೂ ಕಂಡುಬಂದಿದೆ. ಕಳೆದ ಮೂರು ದಿನಗಳಲ್ಲಿ ದೇಶಾದ್ಯಂತ ನೂರಾರು ಇಂಡಿಗೋ ವಿಮಾನ ಹಾರಾಟ ರದ್ದಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣಕ್ಜೆ ಆಗಮಿಸಿದ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
ಗೋವಾದ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರಯಾಣಿಕರ ಭಾರಿ ಗರ್ದಿ ಉಂಟಾಗಿತ್ತು. ಯಾವುದೇ ಮುನ್ಸುಚನೆ ನೀಡದೆಯೇ ಹಲವು ಇಂಡಿಗೊ ವಿಮಾನ ಹಾರಾಟ ಬಂದ್ ಆಗಿತ್ತು. ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರವಾಸಿಗರು ಬೇಸರ ವ್ಯಕ್ತಪಡಿಸಿ- ಯಾವುದೇ ಮುನ್ಸೂಚನೆ ಇಲ್ಲ, ಯಾವುದೇ ಪೋನ್ ಕರೆ ಕೂಡ ಇಲ್ಲ….ವಿಮಾನ ನಿಲ್ದಾಣದಲ್ಲಿ ಕರ್ಮಚಾರಿಗಳಿಂದ ಸಮಾಧಾನಕರ ಉತ್ತರವೂ ಇಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿ ಇದ್ದಕ್ಕಿದ್ದಂತೆಯೇ ಇಂಡಿಗೋ ವಿಮಾನ ಹಾರಾಟ ಬಂದ್ ಆಗಿರುವ ಬಗ್ಗೆ ಇಂಡಿಗೊ ಏರ್ ಲೈನ್ಸ ಇದುವರೆಗೂ ಯಾವುದೇ ಸ್ಪಷ್ಠೀಕರಣ ನೀಡಿಲ್ಲ. ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಸ್ಪಷ್ಠೀಕರಣ ನೀಡುವಂತೆ ಪ್ರವಾಸಿಗರು ಆಘ್ರಹಿಸಿದ್ದಾರೆ.
