ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕ್ಕೆ ಬೀಚ್ ನಲ್ಲಿ ಮೋಜು ಮಸ್ತಿಗಾಗಿ ಆಗಮಿಸುತ್ತಾರೆ ಎಂಬುದಷ್ಟೇ ಬಹಳಷ್ಟು ಜನರಿಗೆ ಗೊತ್ತಿದೆ. ಆದರೆ ಗೋವಾದಲ್ಲಿ ಇದಕ್ಕೂ ಮಿಕ್ಕು ಇನ್ನೂ ಹಲವು ವಿಷಯಗಳು ನಡೆಯುತ್ತಿದೆ. ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ಕೂಡ ನಮ್ನಮ ಸನಾತನ ಸಂಸ್ಕøತಿಯನ್ನು ಅನುಸರಿಸುತ್ತಿರುವ ಹಲವು ಘಟನೆಯನ್ನೂ ಇಲ್ಲಿ ನಡೆಯುತ್ತಿದೆ. ವಿದೇಶಿಗರು Foreigners ಗೋವಾ ಬೀಚ್ ನಲ್ಲಿ ಪ್ರತಿದಿನ ದೇವರ ಭಜನೆ ಮಾಡುತ್ತಿರುವ ವಿಶೇಷ ಇಲ್ಲಿ ನಡೆಯುತ್ತಿದೆ.

ಹೌದು… ಗೋವಾದ ಹರಮಲ್ ಬೀಚ್ ನಲ್ಲಿ ವಿದೇಶಿ ಪ್ರವಾಸಿಗರು ಪ್ರತಿದಿನ ಸಂಜೆ “ಹರೆ ರಾಮ ಹರೆ ಕೃಷ್ಣ” ಭಜನೆ ನಡೆಸಲಾಗುತ್ತಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ವಿದೇಶಿಗರ ಈ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿದೇಶಿಗರ ಭಜನೆಯಿಂದಾಗಿ ಬೀಚ್ ನಲ್ಲಿ ಹೊಸತೊಂದು ವಾತಾವರಣವೇ ಸೃಷ್ಠಿಯಾದಂತೆ ಕಂಡುಬರುತ್ತಿದೆ.

ಪ್ರತಿದಿನ ಸಂಜೆ ಗೋವಾದ ಹರಮಲ್ ಬೀಚ್ ನಲ್ಲಿ  (Goa Haramal Beach) ಈ ವಿದೇಶಿ ಪ್ರವಾಸಿಗರು ಸೇರುತ್ತಾರೆ. ತಾಳ,ಮೃದಂಗ, ಡಮರು, ಹಾರ್ಮೋನಿಯಂ,ತಬಲಾ ವನ್ನು ತಂದು ಸ್ಪೀಕರ್ , ಮೈಕ್ ಬಳಸಿ ಹಿಂದೂಗಳ ಭಜನೆ ಕಾರ್ಯಕ್ರಮವನ್ನು ಇವರು ನಡೆಸುತ್ತಿದ್ದಾರೆ. ಭಜನೆಯ ಸಂದರ್ಭದಲ್ಲಿ ಇವರು ನೃತ್ಯವನ್ನೂ ಮಾಡುತ್ತಿದ್ದು ನಂತರ ಅಲ್ಲಿಗೆ ಬಂದವರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಭಜನಾ ಕಾರ್ಯಕ್ರಮದಲ್ಲಿ ರವಿವಾರ ಹಾಗೂ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ವಿಶೇಷವೆಂದರೆ ಮಧ್ಯಪಾನ ಮಾಡಿವ ಪ್ರವಾಸಿಗರನ್ನು ಈ ಬಜನೆಗೆ ಸೇರಿಸಿಕೊಳ್ಳಲಾಗುತ್ತಿಲ್ಲ. ಪಾಶ್ಚಾತ್ಯ ಸಂಗೀತ ಮತ್ತು ನೃತ್ಯವನ್ನು ಬಿಟ್ಟು ನಮ್ಮಮ ಭಾರತೀಯ ಹಿಂದೂ ಸಂಸ್ಕøತಿಯನ್ನು (Hindu culture) ಈ ವಿದೇಶಿ ಪ್ರವಾಸಿಗರು ಅನುಕರಿಸುತ್ತಿರುವುದರಿಂದ ಗೋವಾದ ಹರಮಲ್ ಬೀಚ್ ವಾತಾವರಣವೇ ತೇಜಸ್ಸಿನಿಂದ ಕೂಡಿದಂತೆ ಕಂಡುಬರುತ್ತಿದೆ.

ಗೋವಾ ಒಂದು ವಿದೇಶಿ -ದೇಶಿ ಪ್ರವಾಸಿಗರ ಮೋಜು ಮಸ್ತಿ ನಡೆಯುವ ಪ್ರವಾಸಿ ತಾಣ ಎಂದು ಅಂದುಕೊಂಡಂತವರಿಗೆ ಇದೊಂದು ತಾಜಾ ಉದಾಹರಣೆಯಾಗಿದೆ. ಗೋವಾದಲ್ಲಿ ಧಾರ್ಮಿಕ ಆಚರಣೆ, ಸಂಸ್ಕøತಿ ಇದೆ. ಇದರಿಂದಾಗಿಯೇ ಗೋವಾಕ್ಕೆ ಬಂದ ವಿದೇಶಿ ಪ್ರವಾಸಿಗರು ಕೂಡ ನಮ್ಮ ಸಂಸ್ಕøತಿ,ಆಚಾರ -ವಿಚಾರಕ್ಕೆ ಆಕರ್ಷಿತರಾಗಿ ಹಿಂದೂಗಳ ದೇವತಾ ಭಜನೆಗಳಲ್ಲಿ ತೊಡಗಿರುವುದು ಕಂಡುಬರುತ್ತಿದೆ.