ಸುದ್ಧಿಕನ್ನಡ ವಾರ್ತೆ
ಪಣಜಿ: ನವೆಂಬರ್ 28 ರಂದು ಗೋವಾದಲ್ಲಿ ನಡೆದ 56 ಬನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ ಸಿಂಗ್ ರವರು ಹಿಂದೂಗಳ ದೈವಾರಾಧನೆಯನ್ನು ಅವಮಾನ ಮಾಡಿದ್ದಕ್ಕೆ ಅವರ ವಿರುದ್ಧ ಪಣಜಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.
ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ನವೆಂಬರ್ 28 ರಂದು 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ದಕ್ಷಿಣ ಕನ್ನಡ ಯಕ್ಷಗಾನದ ಪ್ರದರ್ಶನ ಕೂಡ ನಡೆಯಿತು. ಆಗ ಕಾಂತಾರ ಚಲನಚಿತ್ರ ನಿರ್ದೇಶಕ ಹಾಗೂ ನಾಯಕ ನಟ ರಿಷಭ್ ಶೆಟ್ಟಿ ರವರನ್ನು ಯಕ್ಷಗಾನ ಕಲಾವಿದರು ವೇದಿಕೆಯಲ್ಲಿ ಯಕ್ಷಗಾನದ ಕಿರೀಟ ತೊಡಿಸುವ ಮೂಲಕ ಸಸನ್ಮಾನಿಸಿದ್ದರು. ಆಗ ಉಪಸ್ಥಿತರಿದ್ದ ಬಾಲಿವುಡ್ ನಟ ರಣವೀರ ಸಿಂಗ್ ರವರು ಕಾಂತಾರ ದೈವದಂತೆ ಅನುಕರಣೆ ಮಾಡಿದ್ದರು. ಇಷ್ಟೇ ಅಲ್ಲದೆಯೇ ಕಾಂತಾರ ದೈವವನ್ನು “ಫೀಮೇಲ್ ಘೋಸ್ಟ” ಎಂದು ಕರೆದಿದ್ದರು ಎನ್ನಲಾಗಿದೆ.
ಈರೀತಿ ರಣವೀರ್ ಸಿಂಗ್ ರವರು ಹಿಂದೂಗಳ ದೈವಾರಾಧನೆಯನ್ನು ಅವಮಾನ ಮಾಡಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಹಿಂದೂ ಜನಜಾಗೃತಿ ಸಮೀತಿ ಪಣಜಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
