ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಪರ್ಪಲ್ ಫೆಸ್ಟ, ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಂತರ ಇದೀಗ ದಕ್ಷಿಣ ಏಷ್ಯಾದ ಬಹುವಿಧ ಕಲೆಗಳ ಅತಿದೊಡ್ಡ ಮಹೋತ್ಸವ “ಸೆರೆಂಡಿಪಿಟಿ ಆಟ್ರ್ಸ ಫೆಸ್ಟಿವಲ್” (Serendipity Art Festival-Goa) ಡಿಸೆಂಬರ್ 12 ರಿಂದ 21 ರವರೆಗೆ ಪಣಜಿಯಲ್ಲಿ ನಡೆಯಲಿದೆ.

ಪಣಜಿಯ ಮಾಂಡವಿ ನದಿ ತೀರದಲ್ಲಿ ಹಾಗೂ ಇತರ ಸಾರ್ವಜನಿಕ ಸ್ಥಳದಲ್ಲಿ ವಿವಿಧ ಪ್ರಕಾರದ ಕಲಾ ಪ್ರದರ್ಶನಗಳು ನಡೆಯಲಿದೆ. ಕಾರ್ಯಕ್ರಮ ಮತ್ತು ಕಲಾ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆಯಲಿದೆ. ಸೆರೆಂಡಿಪಿಟಿ Serendipity Art Festival  ಕೇವಲ ಒಂದು ಮಹೋತ್ಸವವಾಗಿರದೆಯೇ ಭಾರತ ಹಾಗೂ ಜಗತ್ತಿನಾದ್ಯಂತ ಕಲಾವಿದರು ಹಾಗೂ ಪ್ರೇಕ್ಷಕರನ್ನು ಒಂದೆಡೆ ಸೇರಿಸುವ ಒಂದು ದೊಡ್ಡ ಸಾಂಸ್ಕøತಿಕ ವೇದಿಕೆಯಾಗಿದೆ.

ಪ್ರಸಕ್ತ ವರ್ಷ ಗೋವಾಕ್ಕೆ ಪಾದಾರ್ಪಣೆ ಮಾಡುವ ಮೊದಲು ಈ ಮಹೋತ್ಸವವ ಬಮಿಂಗ್ ಹ್ಯಾಮ್, ಅಹಮದಾಬಾದ್ ,ನವದೆಹಲಿ, ವಾರಣಾಸಿ, ಚನ್ನೈ, ಗುರುಗ್ರಾಮ,ದುಬೈ, ಹಾಗೂ ಪ್ಯಾರಿಸ್ (Bunningsham, Ahmedabad, New Delhi, Varanasi, Chennai, Gurugram, Dubai, and Paris) ಸೇರಿದಂತೆ ಹಲವು ಶಹರಗಳಲ್ಲಿ 10 ನೇಯ ಆವೃತ್ತಿಯ ಜಲಕ್ ಕಾರ್ಯಕ್ರಮ ಸಾದರಪಡಿಸಿದೆ.
ಪ್ರಸಕ್ತ ಬಾರಿ ಕವಿ ಹಾಗೂ ಕಲಾವಿದ ಸಲಿಲ್ ಚತುರ್ವೇದಿ ರವರ ಕ್ಯೂರೇಶನ್ ಅಡಿಯಲ್ಲಿ ಈ ಸಂಕಲ್ಪನಾ ಮಹೋತ್ಸವ ನಡೆಯಲಿದೆ.