ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಏಷ್ಯದ ಅತಿ ಎತ್ತರದ ಶ್ರೀರಾಮನ ಮೂರ್ತಿ ಅನಾವರಣವನ್ನು ಪ್ರಧಾನಿ ನರೇಂದ್ರ ಮೋದಿ ರವರು ನವೆಂಬರ್ 28 ರಂದು ನೆರವೇರಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೂರ ದೂರದ ಊರಿನಿಂದ ಆಗಮಿಸಿದ್ದ ಹಲವು ಜನ ಭಕ್ತಾದಿಗಳಿಗೆ ನಿರಾಸೆಯಾಗಿತ್ತು. ಭಧ್ರತಾ ದೃಷ್ಠಿಯಿಂದ ಪ್ರಧಾನಿಗಳ ಆಗಮಮನವಾದ ನಂತರ ಮಠದ ಮುಖ್ಯ ದ್ವಾರದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಇದರಿಂದಾಗಿ ಆಗಮಿಸಿದ್ದ ವೃದ್ಧ ಭಕ್ತರೊಬ್ಬರು ತಮ್ಮ ಬೇಸರನ್ನು ಹಂಚಿಕೊಂಡಿರುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ಧುಮಾಡುತ್ತಿದೆ.
ಈ ಐತಿಹಾಸಿಕ ಕ್ಷಣ ವೀಕ್ಷಿಸಲು ಸಾಧ್ಯವಾಗದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಹಾಗೂ ಬಹುಮುಖ್ಯವಾಗಿ ಪ್ರಧಾನಿಗಳನ್ನು ನೋಡಲೆಂದೇ ಬಂದಿದ ವೃದ್ಧ ಭಕ್ತರೊಬ್ಬರು ತಮ್ಮ ಬೇಸರವನ್ನು ಮಾಧ್ಯಮದ ಮುಂದೆ ಹೊರಹಾಕಿರುವುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ಧುಮಾಡುತ್ತಿದೆ.
ನಾವು ಸಾಂಗೆ ಎಂಬ ಗೋವಾದ ದೂರದ ಊರಿನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲೆಂದೇ ಬಂದಿದ್ದೆವು. ಪಾಸ್ ನಲ್ಲಿ ನೀಡಿರುವ ವೇಳೆಯ ಅನುಸಾರ ಅಂದು ಮಧ್ಯಾನ್ಹ 3 ಗಂಟೆಯಿಂದಲೇ ಮಠದ ಮುಖ್ಯದ್ವಾರದ ಬಳಿ ಬಂದು ಕುಳಿತಿದ್ದೆವು. ಆದರೆ ನಮ್ಮನ್ನು ವೇದಿಕೆಯ ಬಳಿ ಹೋಗಲು ಬಿಡಲಿಲ್ಲ. ಪ್ರಧಾನಿಗಳು ಕಾರ್ಯಕ್ರಮ ಮುಗಿಸಿ ಹೋದ ಮೇಲೆ ನಿಮ್ಮನ್ನು ಒಳಕ್ಕೆ ಬಿಡುತ್ತೇವೆ ಎಂದು ಅಲ್ಲಿದ್ದ ಪೋಲಿಸರು ನಮ್ಮನ್ನು ತಡೆಹಿಡಿದಿದ್ದರು. ಆದರೆ ಅಷ್ಟು ದೂರದಿಂದ ಅವರನ್ನು ನೋಡಲೆಂದೇ ಬಂದ ನಮಗೆ ಪ್ರಧಾನಿಗಳನ್ನು ನೋಡುವ ಭಾಗ್ಯ ಸಿಗಲಿಲ್ಲ ಎಂದು ಹಿರೀಯ ನಾಗರೀಕರೊಬ್ಬರು ತಮ್ಮ ಬೇಸರ ಹೊರಹಾಕಿದ್ದಾರೆ.
ಪ್ರಧಾನಿಗಳು ಅಂದು ಪರ್ತಗಾಳಿ ಮಠಕ್ಕೆ ಆಗಮಿಸುವ ಸಂದರ್ಭದಲ್ಲಿ ಮಠದ ಪ್ರವೇಶದ್ವಾರದಿಂದ ಯಾರೂ ಒಳಕ್ಕೆ ಪ್ರವೇಶಿಸದಂತೆ ತಡೆದಿದ್ದರು. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗದೆಯೇ ಮುಖ್ಯದ್ವಾರದ ಹೊರಭಾಗದಲ್ಲಿ ನಿಲ್ಲುವಂತಾಗಿತ್ತು. ಭಧ್ರತಾ ದೃಷ್ಠಿಯಿಂದ ಪ್ರಧಾನಿಗಳು ಹೆಲಿಕ್ಯಾಪ್ಟರ್ ಮೂಲಕ ಆಗಮಿಸುವ ಮುನ್ನವೇ ಅಧಿಕ ಕಟ್ಟೆಚ್ಚರ ವಹಿಸಿ ಮಠದ ಪರಿಸರದಲ್ಲಿ ಹೊಸದಾಗಿ ಯಾರೂ ಪ್ರವೇಶಿಸದಂತೆ ತಡೆಯಲಾಗಿತ್ತು. ಇದು ಅನಿವಾರ್ಯವಾಗಿದ್ದರೂ ಹಲವರಲ್ಲಿ ಬೇಸರವನ್ನುಂಟುಮಾಡಿದೆ. ಈ ಸುದ್ಧಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಸದ್ಧುಮಾಡುತ್ತಿದೆ.
