ಸುದ್ಧಿಕನ್ನಡ ವಾರ್ತೆ
ಕಳೆದ ಕೆಲದಿನಗಳಿಂದ ಧಾರ್ಮಿಕ ಸ್ಥಳದ ಮಾತು ಬಂತೆಂದರೆ ಮೊದಲು ಗೋವಾದ ಹೆಸರು ಕೇಳಿಬರುವಂತಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ಧಿಯಾಗಲು ಕಾರಣ ಗೋವಾದ ಕಾಣಕೋಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಏಷ್ಯದ ಅತಿ ಎತ್ತರದ ಕಂಚಿನ ಶ್ರೀರಾಮನ ಮೂರ್ತಿ.

ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದಲ್ಲಿ 550 ನೇಯ ವರ್ಧಂತಿ ಉತ್ಸವ ನಡೆಯುತ್ತಿದೆ. ಈ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಡಿಸೆಂಬರ್ 7 ರವರೆಗೆ ನಡೆಯಲಿದೆ. ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಪರ್ತಗಾಳಿ ಮಠದ ಮುಂಭಾಗದಲ್ಲಿ ನಿರ್ಮಿಸಲಾದ ಏಷ್ಯಾದ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಶ್ರೀರಾಮನ 3 ಡಿ ಪ್ರೊಡಕ್ಷನ್ ಮ್ಯಾಪಿಂಗ್ ಪ್ರದರ್ಶನ ನಡೆಯಿತು.


ಲೈಟಿಂಗ್ ಮೂಲಕ 77 ಅಡಿ ಶ್ರೀರಾಮನ ಮೂರ್ತಿಯ ಮೇಲೆ ಶ್ರೀರಾಮಾಯಣದ ಸಂಪೂರ್ಣ ಕಥಾನಕವನ್ನು ಪ್ರದರ್ಶಿಸಲಾಯಿತು. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತಸಾಗರವೇ ತುಂಬಿತ್ತು. ಈ ಸುಂದರ ಶ್ರೀರಾಮಾಯಣದ ಕಥಾನಕವನ್ನು ವೀಕ್ಷಿಸಿದ ಭಕ್ತರ ಕಣ್ಣಲ್ಲಿ ನೀರು ತುಂಬಿತ್ತು.

ಪ್ರಸಿದ್ಧ ಧಾರ್ಮಿಕ ಸ್ಥಳ…
ಶ್ರೀಗೋಕರ್ಣ ಪರ್ತಗಾಳಿ ಮಠವು ಜಗತ್ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಪ್ರಸಿದ್ಧಿ ಪಡೆಯಲಿದೆ. ಇಲ್ಲಿ ಏಷ್ಯದ ಅತಿ ಎತ್ತರದ ಕಂಚಿನ ರಾಮನ ಮೂರ್ತಿ ದರ್ಶನ ಮಾತ್ರವಲ್ಲದೆಯೇ ಆಗಮಿಸುವ ಭಕ್ತರಿಗೆ 3ಡಿ ಪ್ರೊಡಕ್ಷನ್ ಮ್ಯಾಪಿಂಗ್ ಪ್ರದರ್ಶ ಇನ್ನಷ್ಟು ಆಕರ್ಷಣೆ ಪಡೆದುಕೊಳ್ಳಲಿದೆ. ದೈವಿ ಭಕ್ತರನ್ನು ಆಕರ್ಷಿಸಲಿದೆ.