ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವ ನ.27 ರಿಂದ ಆರಂಭಗೊಂಡಿದೆ. 10 ದಿನಗಳ ಕಾ; ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇಶವಿದೇಶಗಳಿಂದ ಲಕ್ಷಾಂತರ ಜನ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಭಧ್ರತೆಯ ದೃಷ್ಠಿಯಿಂದ ಹಾಗೂ ಅಗತ್ಯ ಸೌಲಭ್ಯದ ದೃಷ್ಠಿಯಿಂದ ಮಾಹಿತಿ ತಂತ್ರಜ್ಞಾನ,ಇಲೆಕ್ಟ್ರಾನಿಕ್ಸ ಹಾಗೂ ಕಮ್ಯುನಿಕೇಶನ್ ವಿಭಾಗ, ಇನ್ಫೊಟೆಕ್ ಕಾರ್ಪೊರೇಶನ್ ಆಫ್ ಗೋವಾ ಇವರ ಸಹಯೋಗದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.


ಪರ್ತಗಾಳಿ ಮಠದ ಪರಿಸರದಲ್ಲಿ 100 ಕ್ಕೂ ಅಧಿಕ ವಾಯ್ ಫಾಯ್ ಎಕ್ಸೆಸ್ ಪಾಯಿಂಟ್, 200 ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದಾಗಿ ಮಠದ ಪರಿಸರದಲ್ಲಿ ಡಿಜಿಟಲ್ ಸೌಲಭ್ಯ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಿದೆ.

ಮಠದ ಪರಿದರದಲ್ಲಿ ಸ್ಥಾಪಿಸಲಾದ ಈ ಸೌಲಭ್ಯವನ್ನು ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ರೋಹನ್ ಖಂವಟೆ, ಐಟಿಜಿ ಅಧ್ಯಕ್ಷ ಡಾ.ಚಂದ್ರಕಾಂತ ಶೇಟಯೆ, ದೇವಸ್ಥಾನ ಸಮೀತಿ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ರವರು ಉಪಸ್ಥಿತರಿದ್ದರು.

ಕಾಣಕೋಣ ಪರಿಸರದಲ್ಲಿ ಇದುವರೆಗೆ ಜಿಯೊ,ಬಿಎಸ್ ಎನ್ ಎಲ್ 5ಜಿ ನೆಟ್ ವರ್ಕ ಲಭ್ಯವಿತ್ತು. ಇದೀಗ ಏರ್ ಟೆಲ್ ಸಂಪರ್ಕ ನೀಡಲಾಗಿರುವುದರಿಂದ ಮಠದ ಪರಿಸದರದಲ್ಲಿ ನೆಟ್ ವರ್ಕ ಸುಧಾರಣೆಯಾಗಿದೆ. ಸದ್ಯ ಹೆಚ್ಚುತ್ತಿರುವ ಭಕ್ತಾದಿಗಳ ನೆಟ್ ವರ್ಕ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮಠವು ಇದೀಗ ಈ ಸೌಲಭ್ಯ ಪಡೆದುಕೊಂಡಿದೆ. ಇದರಿಂದಾಗಿ ಹೊಸ ವಾಯ್ ಫೈ ಪಾಯಿಂಟ್ ನಿಂದಾಗಿ 10 ಜಿಬಿಪಿಎಸ್ ವರೆಗೆ ನೆಟ್ ಸ್ಪೀಡ್ ಲಭಿಸಲಿದೆ. ಸದ್ಯ 100 ಕ್ಕೂ ಅಧಿಕ ವಾಯ್ ಫೈ ಪಾಯಿಂಟ್ ಗಳ ಪೈಕಿ 50 ಸಂಪರ್ಕವನ್ನು ಕಾರ್ಯಕ್ರಮದ ನಂತರವೂ ಹಾಗೆಯೇ ಇಡಲಾಗುವುದು. ಮಠದ ಪರಿಸರದಲ್ಲಿ ಒಟ್ಟೂ 250 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕೆಲವು ಕ್ಯಾಮರಾಗಳು ಎಐ ಸೌಲಭ್ಯವನ್ನೂ ಹೊಂದಿದೆ. ಪೋಲಿಸ್ ಇಲಾಖೆಯ ಸೂಚನೆಯಂತೆಯೇ ಈ ಹೆಚ್ಚುವರಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸುರಕ್ಷತೆ,ಸಾರ್ವಜನಿಕ ಸುರಕ್ಷತೆ ಹೆಚ್ಚು ಪ್ರಭಾವಶಾಲಿಯಾಗಿ ನಿಭಾಯಿಸಬಹುದಾಗಿದೆ.

ಶ್ರಿಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಈ ಕುರಿತು ಮಾಹಿತಿ ನೀಡಿ- ಶ್ರೀಮಠದ ಸಾರ್ಧ ಪಂಚಶತಮಾನೋತ್ಸವದ ಭವ್ಯ ಸಮಾರಂಭದ ಈ ಸಂದರ್ಭದಲ್ಲಿ ಮಠಕ್ಕೆ ಸಂಪೂರ್ಣ ಡಿಜಿಟಲ್ ಸೌಲಭ್ಯ ಕಲ್ಪಿಸಿರುವುದಕ್ಕೆ ಮಠವು ಗೋವಾ ಸರ್ಕಾರ ಹಾಗೂ ಸಚುವ ರೀಹನ್ ಖಂವಟೆ ರವರಿಗೆ ಆಭಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಡಿಜಿಟಲ್ ಸೌಲಭ್ಯ ಲಭಿಸುವುದು ಹೆಚ್ಚು ಲಾಭದಾಯಕವಾಗಿದೆ. ಮಠ ಹಾಗೂ ಸ್ಥಳೀಯ ಸಮುದಾಯದ ದೃಷ್ಠಿಯಿಂದ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ನುಡಿದರು.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರೋಹನ್ ಖಂವಟೆ ಮಾಹಿತಿ ನೀಡಿ- ಪರ್ತಗಾಳಿ ಮಠದಲ್ಲಿ ವಾಯ್ ಫಾಯ್ ಹಾಗೂ ಸಿಸಿಟಿವಿಯಂತಹ ಅಗತ್ಯ ಸೌಲಭ್ಯ ಕಲ್ಪಿಸಿರುವುದರಿಂದ ಗೋವಾದ ಡಿಜಿಟಲ್ ವ್ಯವಸ್ಥೆ ಅಧಿಕ ಕ್ಷಮತೆ ಸಾಧಿಸುತ್ತಿದೆ. ಈ ಸೌಲಭ್ಯವು ಮಠದಲ್ಲಿ ಕೇವಲ ಸದ್ಯದ ಉತ್ಸವಕ್ಕಾಗಿ ಮಾತ್ರವಲ್ಲ.ಮುಂದಿನ ಅನೇಕ ವರ್ಷ ಸ್ಥಳೀಯ ಸಮುದಾಯ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದರಿಂದಾಗಿ ಗೋವಾ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವಾಗಿ ಇನ್ನಷ್ಟು ದೃಢವಾಗಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.