ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಶನಿವಾರ ಸಂಜೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಲಾಯಿತು. ಪ್ರಭು ಶ್ರೀ ಸೀತಾ ರಾಮರ ಪಲ್ಲಕ್ಕಿಯನ್ನು ಬೃಹತ್ ಮೆರವಣಿಗೆ, ಭಕ್ತಾದಿಗಳ ಜೈಕಾರದೊಂದಿಗೆ ನೆರವೇರಿಸಲಾಯಿತು.

ಲೋಕಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಮಠದ ಭಕ್ತಾದಿಗಳು ಶ್ರೀ ರಾಮದೇವರ ಕೋಟಿ ಕೋಟಿ ಜಪ ಪೂರ್ಣಗೊಳಿಸಿದ್ದಾರೆ. ದೇಶಾದ್ಯಂತ ಶ್ರೀರಾಮ ದಿಗ್ವಿಜಯ ರಥಯಾತ್ರೆಯ ನಂತರ ಶನಿವಾರ ಶ್ರೀಸೀತಾರಾಮಚಂದ್ರರ ಕಲ್ಯಾಣೋತ್ಸವ ನೆರವೇರಿಸಲಾಯಿತು. ನೆರೆದಿದ್ದ ಸಹಸ್ರಾರು ಭಕ್ತರು ಕಲ್ಯಾಣೋತ್ಸವದ ಭಕ್ತಿಪೂರ್ವಕ ದರ್ಶನ ಪಡೆದುಕೊಂಡರು.

 

ಶ್ರೀರಾಮನಾಮ ತಾರಕ ಹವನ..
ವರ್ಧಂತಿ ಉತ್ಸವದ ಅಂಗವಾಗಿ ಮೂರನೇಯ ದಿನವಾದ ಶನಿವಾರದಂದು ಬೆಳಿಗ್ಗೆಯಿಂದ ಶ್ರೀ ರಾಮನಾಮ ತಾರಕ ಮಂತ್ರ ಹವನ ನೆರವೇರಿಸಲಾಯಿತು. ಪ್ರತಿಯೊಂದು ಹೋಮಕುಂಡಕ್ಕೆ ಪ್ರತ್ಯೇಕ ಯಜಮಾನತ್ವದ ಮೂಲಕ ಹವನ ನೆರವೇರಿಸಲಾಯಿತು. ನಂತರ ಲಘು ಪೂರ್ಣಾಹುತಿ ಸಮರ್ಪಿಸಲಾಯಿತು.
ಶನಿವಾರ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು. ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೂ ಶ್ರೀಗೋಕರ್ಣ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.