ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ); ಪರ್ತಗಾಳಿ ಮಠವು 550 ವರ್ಷ ಪೂರೈಸಿರುವುದು ಇದು ಒಂದು ಐತಿಹಾಸಿಕ ದಿನವಾಗಿದೆ. ಈ ಮಠವು ಜನರಿಗೆ ಉತ್ತಮ ಮಾರ್ಗ ತೋರಿಸುವ ಕೇಂದ್ರವಾಗಿದೆ. ಅಂದು ಯಾವ ಉದ್ದದೇಶದಿಂದ ಮಠ ಸ್ಥಾಪನೆಯಾಗಿತ್ತೋ ಅದು ಅದೇ ಆಧ್ಯಾತ್ಮಿಕ ಉದ್ಧೇಶವನ್ನಿಟ್ಟುಕೊಂಡು ಮಠ ಮುಂದುವರೆಯುತ್ತಿದೆ. ಕಠಿಣ ಸಮಯದಲ್ಲಿಯೂ ಕೂಡ ಮಠವು ಜನರಿಗೆ ಆಧಾರ ಸ್ಥಂಭವಾಗಿದೆ. ಒಂದು ಸಂಸ್ಥೆಯು ಸತ್ಯ,ಸೇವೆಯಲ್ಲಿ ತೊಡಗುತ್ತದೆಯೋ ಅದು ಸಮಾಜದಲ್ಲಿ ಸ್ಥಿರವಾಗುತ್ತದೆ. ಪರ್ತಗಾಳಿ ಮಠದಲ್ಲಿ ಇಂದು ಹೊಸ ಅಧ್ಯಾಯ ಆರಂಭಗೊಂಡಿದೆ. ಇಂದು ಇಲ್ಲಿ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಮೂರ್ತಿಯನ್ನು ಅನಾವರಣ ಗೊಳಿಸಿದ್ದೇನೆ. ಅಯೋಧ್ಯೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಧರ್ಮಧ್ವಜ ಸ್ಥಾಪಿಸುವ ಅವಕಾಶ ಲಭಿಸಿತು. ಯುವ ಪೀಳಿಗೆಗೆ ಪರ್ತಗಾಳಿ ಮಠವು ಜ್ಞಾನ,ಪ್ರೇರಣೆ ನೀಡುವ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಗೋವಾದ ಕಾಣಕೋಣದಲ್ಲಿರುವ ಶ್ರೀಪರ್ತಗಾಳಿ ಜೀವೊತ್ತಮ ಮಠದ 550 ನೇಯ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಸ್ಥಾಪಿಸಲಾಗಿರುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ನಂತರ ಪ್ರಧಾನಿಗಳು ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರೊಂದಿಗೆ ಮಠಕ್ಕೆ ತೆರಳಿ ಶ್ರೀರಾಮ, ವೀರವಿಠ್ಠಲ ದೇವರ ದರ್ಶನ ಪಡೆದುಕೊಂಡರು. ನಂತರ ಪ್ರಧಾನಿಗಳು ಮಠದಲ್ಲಿ ವಿಶೇಷವಾಗಿ ಕೆತ್ತಲಾದ ಕಾವಿ ಕಲೆ ಮತ್ತು ಮರದ ಕೆತ್ತನೆಯ ಬಗ್ಗೆ ಶ್ರೀಗಳಿಂದ ಮಾಹಿತಿ ಪಡೆದುಕೊಂಡರು.
ಮಾರಂಭದ ದಿವ್ಯ ನಾನಿಧ್ಯ ವಹಿಸಿದ್ದ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಆಶೀರ್ವಚನ ನೀಡಿ- ಮಠದ ಇತಿಹಾಸದಲ್ಲಿ ಇಂದಿನ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಇದರ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಮೋದಿಯವರು ಚಾತುರ್ನಾಸ, ನವರಾತ್ರಿ ವೃತವನ್ನೂ ಮಾಡುತ್ತಾರೆ. ಈ ಎಲ್ಲ ವೃತಗಳ ಫಲದಿಂದಾಗಿ ಅವರು ಭಾರತವನ್ನು ಇಷ್ಟು ಮುನ್ನಡೆಸಲು ಸಾಧ್ಯವಾಗಿದೆ ಎಂದರು.

ಪರ್ತಗಾಳಿ ಮಠವನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಂಡಿರುವ ಬಗ್ಗೆಯೂ ಶ್ರೀಗಳ ಬಳಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಮಠದ ಸ್ವಚ್ಛತೆಯ ಬಗ್ಗೆ ಪ್ರಧಾನಿಗಳು ತಮ್ಮ ಭಾಷಣದಲ್ಲಿಯೂ ಹೇಳಿರುವುದು ವಿಶೇಷ. ಪರ್ತಗಾಳಿ ಮಠದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕಟ್ಟಡದ ಬಗ್ಗೆ ಕೂಡ ಪ್ರಧಾನಿಗಳು ಶ್ರೀಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲರಾದ ಪುಸಾಪತಿ ಅಶೋಕ ಗಜಪತಿ ರಾಜು, ಮುಖ್ಯಮಂತ್ರಿ ಪ್ರಮೋದ ಸಾವಂತ್ , ಕೇಂದ್ರಸಚಿವ ಶ್ರೀಪಾದ ನಾಯಕ್, ಸಚಿವ ದಿಗಂಬರ್ ಕಾಮತ್, ರಮೇಶ್ ತವಡಕರ್ ಉಪಸ್ಥಿತರಿದ್ದರು. ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.