ಸುದ್ಧಿಕನ್ನಡ ವಾರ್ತೆ

ಪಣಜಿ: ಕಾಂತಾರ ಸೂಪರ್ ಡೂಪರ್ ಕನ್ನಡ ಚಲನಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ರವರು ಪತ್ನಿ ಪ್ರಗತಿ ಶೆಟ್ಟಿ ರವರೊಂದಿಗೆ ಗೋವಾದಲ್ಲಿ ನಡೆಯುತ್ತಿರುವ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಅವರ ಪಣಜಿ ಅಲ್ತಿನೊದಲ್ಲಿರುವ ಮಹಾಲಕ್ಷ್ಮೀ ನಿವಾಸದಲ್ಲಿ ಭೇಟಿ ಮಾಡಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ರಿಷಬ್ ಶೆಟ್ಟಿ ರವರೊಂದಿಗೆ ನಡೆಸಿದ ಸಂವಾದದಲ್ಲಿ ಮುಖ್ಯಮಂತ್ರಿ ಸಾವಂತ್ ರವರು ಕಾಂತಾರ ಚಲನಚಿತ್ರಕ್ಕೆ ಲಭಿಸುದ ಅಮೋಘ ಯಶಸ್ಸಿಗೆ “ಉತ್ಕøಷ್ಠ ಹಾಗೂ ಬಹುಗುಣಿ” ನಟ ಎಂದು ಗೌರವಿಸಿ ರಿಷತ್ ಶೆಟ್ಟಿ ರವರನ್ನು ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ನಮ್ಮ ಸಂಸ್ಕøತಿ ಸನ್ಮಾನ ಮಾಡುವಂತಹ ಹಾಗೂ ಜಗತ್ತಿನಾದ್ಯಂತ ಇನ್ನಷ್ಟು ಕೀರ್ತಿ ಗಳಿಸುವಂತಹ ಅವಕಾಶಗಳು ಒದಗಿ ಬರಲಿ ಎಂದು ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕಾಂತಾರ ಚಲನಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೆಯೇ ಇಡೀ ಜಗತ್ತಿನಾದ್ಯಂತ ಉತ್ತಮ ಪ್ರಶಂಸೆ ವ್ಯಕ್ತಿವಾಗಿದೆ. ಈ ಚಲನಚಿತ್ರ ಜಗತ್ತಿನಾದ್ಯಂತ ಪ್ರದರ್ಶನ ಕಂಡು ಹಿಟ್ ಆಗಿದೆ. ಕರಾವಳಿ ಭಶಾಗದ ದೈವಾರಾಧನೆಗೆ ಸಂಬಂಧಿಸಿದ ಚಿತ್ರಕಥೆಯಾಗಿದೆ.

ಮೂಲತಃ ಕನ್ನಡ ಭಾಷೆಯ ಕಾಂತಾರ ಚಲನಚಿತ್ರವು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜಗತ್ತಿನಾದ್ಯಂತ ಪ್ರದರ್ಶನ ಕಂಡಿದೆ. ಕಾಂತಾರ ಚಲನಚಿತ್ರವು ಉತ್ತಮ ಚಿತ್ರಕಥೆ ಹಾಗೂ ಅಧ್ಬುತ ಅಭಿನಯದ ಮೂಲಕ ಬಾಕ್ಸ ಆಫಿಸ್ ಹಿಟ್ ಚಲನಚಿತ್ರವಾಗಿದೆ. ಕಾಂತಾರ ಹಾಗೂ ಕಾಂತಾರ ಚಾಪ್ಟರ್ 1 ಈ ಎರಡೂ ಚಲನಚಿತ್ರಗಳು ಭಾರಿ ಯಶಸ್ಸು ಕಂಡಿವೆ.