ಸುದ್ಧಿಕನ್ನಡ ವಾರ್ತೆ
ಪಣಜಿ: ಕನ್ನಡಿಗರ ಮನೆ ಮಾತಾಗಿರುವ ಜಿ ಪವರ್ ರವರ “ಹಳ್ಳಿ ಪವರ್” ತಂಡವು ನಿರೂಪಕರು ಹಾಗೂ ಕಲಾವಿದರಾದ ಅಕುಲ್ ಬಾಲಾಜಿ ರವರ ನೇತೃತ್ವದಲ್ಲಿ ಗೋವಾಕ್ಕೆ ಆಗಮಿಸಿದ್ದು ನವೆಂಬರ್ 27 ರಂದು ಸಂಜೆ ಗೋವಾದಲ್ಲಿ ಕನ್ನಡಿಗರೊಂದಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ವಿಶೇಷ ಕಾರ್ಯಕ್ರಮವು ಬೋಟ್ ನಲ್ಲಿ ನಡೆಯಲಿದ್ದು ಗೋವಾ ಕನ್ನಡ ಸಮಾಜ ಪಣಜಿ ಸಂಘದ ಪದಾಧಿಕಾರಿಗಳು ಹಾಗೂ ಗೋವಾದಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಪುರೋಹಿತರ ಕುಕುಂಬಗಳಿಗೆ ಭಾಗವಹಿಸಲು ಅವಕಾಶ ಲಭಿಸಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಜೀಪವರ್ ಹಳ್ಳಿ ಪವರ್ ತಂಡವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಚಿತವಾಗಿಯೇ ವ್ಯವಸ್ಥೆಯನ್ನು ಮಾಡಿದೆ. ಗೋವಾದಲ್ಲಿ ನೆಲೆಸಿರುವ ಕೇವಲ 50 ಜನ ಕನ್ನಡಿಗರಿಗೆ ಮಾತ್ರ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಈಗಾಗಲೇ ಎಲ್ಲಾ ಆಸನಗಳು ಭರ್ತಿಯಾಗಿದೆ.
ಹಳ್ಳಿ ಪವರ್ ಈ ವಿಶೇಷ ಕಾರ್ಯಕ್ರಮದಲ್ಲಿ ಗೋವಾ ಕನ್ನಡ ಸಮಾಜದ ಪದಾಧಿಕಾರಿಗಳೊಂದಿಗೆ ಗೋವಾದಲ್ಲಿ ನೆಸಿರುವ ಉತ್ತರಕನ್ನಡ ಜಿಲ್ಲೆಯ ಪುರೋಹಿತರ ಕುಟುಂಬಗಳ ಪೈಕಿ 40 ಜನ ರಿಗೆ ಮಾತ್ರ ಈ ಅವಕಾಶ ಲಭಿಸಿರುವುದು ವಿಶೇಷ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡಿಗರೆಲ್ಲರೂ ಹಳ್ಳಿ ಮೂಲದಿಂದ ಬಂದವರೇ ಆಗಿದ್ದಾರೆ.
ಜೀ ಪವರ್ ನಲ್ಲಿ ಪ್ರಸಾರವಾಗುವ ಹಳ್ಳಿ ಪವರ್ ಕಾರ್ಯಕ್ರಮವು ಕನ್ನಡಿಗರ ಮನೆ ಮಾತಾಗಿದೆ. ಈ ಕಾರ್ಯಕ್ರಮವು ಹಳ್ಳಿಗಳ ಜೀವನದ ಬಗ್ಗೆ ಒತ್ತು ನೀಡಿ ಮಾಡುತ್ತಿರುವ ಕಾರ್ಯಕ್ರಮವಾಗಿದೆ. ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಹಳ್ಳಿ ಪವರ್ ತಂಡದೊಂದಿಗೆ ಗೋವಾದಲ್ಲಿ ಇಂದು ಕನ್ನಡಿಗರು ಪಾಲ್ಗೊಳ್ಳಲು ಅವಕಾಶ ಲಭಿಸಿರುವುದು ವಿಶೇಷ.
