ಸುದ್ಧಿಕನ್ನಡ ವಾರ್ತೆ
Goa (ವಾಸ್ಕೊ): ಶಸ್ತ್ರಾಸ್ತ್ರದೊಂದಿಗೆ 8 ಜನ ಧರೋಡೆಕೋರರು (Robbers) ಬೆಳಗಿನ ಜಾವ ಚಾಮುಂಡಾ ಆರ್ಕೆಡ್ ನಲ್ಲಿನ ವ್ಯಾಪಾರಿ ಸಾಗರ ನಾಯಕ್ ರವರ ಆರನೇ ಮಹಡಿಯಲ್ಲಿರುವ ಪ್ಲ್ಯಾಟ್ ಗೆ ನುಗ್ಗಿ ಕೋಟ್ಯಂತರ ರೂ ಮೌಲ್ಯದ ವಸ್ತು ಹಾಗೂ ಹಣವನ್ನು ದೋಚಿ ಪರಾರಿಯಾದ ಘಟನೆ ಮಂಗಳವಾರ ಗೋವಾದ ವಾಸ್ಕೊದಲ್ಲಿ ನಡೆದಿದೆ.

ಕಬ್ಬಿಣದ ರಾಡ್ ಹಾಗೂ ಅಲ್ಯುಮಿನಿಯಮ್ ರಾಡ್ ಗಳನ್ನು ಹಿಡಿದು 8 ಜನ ಧರೋಡೆಕೋರರ ಗುಂಪು ವಾಸ್ಕೊದ ನಾಯಕ್ ರವರ ಪ್ಲ್ಯಾಟ್ ಗೆ ನುಗ್ಗಿದ್ದಾರೆ. ಧರೋಡೆಕೋರರು ಇವರ ಬೆಡ್ ರೂಂ ಬಾಗಿಲನ್ನೂ ಕೂಡ ರಾಡ್ ನಿಂದಲೇ ಒಡೆದು ತೆಗೆದಿದ್ದಾರೆ. ಅಲ್ಲಿಯೇ ಮಲಗಿದ್ದ ಸಾಗರ, ಅವರ ಪತ್ರಿ ಮಕ್ಕಳು ವಯೋವೃದ್ಧ ತಾಯಿಯ ಮೇಲೆ (Attacked )ಹಲ್ಲೆ ನಡೆಸಿದ್ದಾರೆ.

ಆರಂಭದಲ್ಲಿ ಸಾಗರ್ ರವರು ಧರೋಡೆಕೋರರನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅವರ ಮೇಲೆ (Robbers) ಧರೋಡೆಕೋರರು ಹಲ್ಲೆ ನಡೆಸಿದರು ಎನ್ನಲಾಗಿದೆ. ನಂತರ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಕೂರಿಸಿ, ಜೀವ ಬೆದರಿಕೆ ಹಾಕಿದರು ಎನ್ನಲಾಗಿದೆ.

ದೀಪಾವಳಿ ಹಬ್ಬದ ನಂತರ ಹಾಗೂ ಪರ್ತಗಾಳಿ ಮಠದಲ್ಲಿ ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಯಕ್ ರವರು ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಹಾಗೂ ಹಣವನ್ನು ತಂದಿಟ್ಟುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಾಗರ ನಾಯಕ್ ಹಾಗೂ ಅವರ ಕುಟುಂಬದವರ ಮೇಲೆ ಧರೋಡೆಕೋರರು ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಗೋವಾ ಪೋಲಿಸ್  (Police) ಅಧೀಕ್ಷಕ ಟಿಕಮ್ ಸಿಂಗ್ ರವರು ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಧರೋಡೆಕೋರರು ಯುವಕರಾಗಿದ್ದು ಬಿಹಾರಿ ಭಾಷೆ ಮಾತನಾಡುತ್ತಿದ್ದರು. ಎಲ್ಲ ಧರೋಡೆಕೋರರು ಬುಖಕ್ಕೆ ಮಾಸ್ಕ ಹಾಗೂ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.