ಸುದ್ಧಿಕನ್ನಡ ವಾರ್ತೆ
ಪಣಜಿ: ಕೊಂಕಣ ರೈಲ್ವೆ ಪೋಲಿಸರು ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಕಾರ್ಯಾಚರಣೆ ನಡೆಸಿ 50 ಲಕ್ಷ ಮೌಲ್ಯದ ಬಂಗಾರ ಹಾಗೂ 34,500 ರೂ ಹಣವನ್ನು ಜಫ್ತಿ ಮಾಡಿದ್ದಾರೆ.

ಶಂಕಿತರ ಬಗ್ಗೆ ನಿಖರ ಮಾಹಿತಿಯ ಆಧಾರದ ಮೇಲೆ ಪೋಲಿಸರು ಈ ಕಾರ್ಯಾಚರಣೆ ಕೈಗೊಂಡಿದ್ದರು. ಈ ಪ್ರಕರಣದಲ್ಲಿ ಹರಿಯಾಣ ರಾಜ್ಯದ ನಾಲ್ವರು ಶಂಕಿತರನ್ನು ಪೋಲಿಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜೇಶ್ ರಾಮ, ಮನೋಜ್ ಕುಮಾರ್, ಜಿತೇಂದ್ರ ಸಿಂಹ, ಸೇರಿದಂತೆ ನಾಲ್ವರನ್ನು ಪೋಲಿಸರು ಬಂಧಿಸಿದ್ಧು ಇವರೆಲ್ಲರೂ ಮೂಲತಃ ಹರಿಯಾಣದವರು ಎನ್ನಲಾಗಿದೆ. ಇವರ ಬಳಿ ಬಂಗಾರ ಹೇಗೆ ಬಂತು, ಇವರ ಉದ್ದೇಶವೇನು ಎಂಬುದು ತನಿಖೆಯಿಂದ ಹೊರಬೀಳಬೇಕಿದೆ.

ಜಫ್ತಿ ಮಾಡಿರುವ ಬಂಗಾರದ ಆಭರಣ ಹಾಗೂ ಹಣವನ್ನು ಪ್ರಾಥಮಿಕ ತನಿಖೆಯ ನಂತರ ಹಾಗೂ ಪಂಚನಾಮೆಯ ನಂತರ ಮಂಗಳೂರು ರೈಲ್ವೆ ಪೋಲಿಸರಿಗೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಿಂದಾಗಿ ರೈಲ್ವೆ ಮಾರ್ಗವನ್ನು ಬಳಸಿಕೊಂಡು ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಬಗ್ಗೆ ಹಲವು ಪ್ರಶ್ನೆ ಮೂಡುವಂತಾಗಿದೆ. ರೈಲ್ವೆ ಪ್ರಯಾಣಿಕರಿಗೆ ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೆ ರೈಲ್ವೆ ಪೋಲಿಸರಿಗೆ ಮಾಹಿತಿ ನೀಡುವಂತೆ ಪೋಲಿಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.