ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಸಾರ್ಥ ಪಂಚಶತಾಬ್ದಿ ಮಹೋತ್ಸವದ ಹಿನ್ನೆಲೆಯಲ್ಲಿ ಮಠದ ಪರಿಸರದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಮಠದ ಪರಿಸರದಲ್ಲಿ ಸಿರ್ನಿಸಲಾಗುತ್ತಿರುವ ರಾಮಾಯಣ ಪಾರ್ಕ (Raamayana Park) ಕಾರ್ಯಕ್ರಮದ ಕೇಂದ್ರಬಿಂದುವಾಗಲಿದೆ. ಸ್ಟೇಟ್ ಆಫ್ ಆರ್ಟ ಯೋಜನೆಯು ಧಾರ್ಮಿಕತೆ ಹಾಗೂ ಪ್ರವಾಸೋದ್ಯಮದ ಆಕರ್ಷಣೆ ಪಡೆದುಕೊಳ್ಳಲಿದೆ.
ನವೆಂಬರ್ 28 ರಂದು ಗೋವಾದ ಪರ್ತಗಾಳೀ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಶ್ರೀ ರಾಮನ ಮೂರ್ತಿಯನ್ನು (P.m Narendra Modi) ಪ್ರಧಾನಿನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಭವಿಷ್ಯದಲ್ಲಿ ಗೋವಾ ಪರ್ತಗಾಳಿ ಮಠ ಧಾರ್ಮಿಕ ಪ್ರವಾಸೋದ್ಯಮದ ಮುಖ್ಯ ಕೇಂದ್ರವಾಗುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ. ಇಲ್ಲಿ ನಿರ್ಮಿಸಲಾಗುತ್ತಿರುವ ರಾಮಾರಣ ಪಾರ್ಕ ಧನುಷ್ ಆಕೃತಿಯಲ್ಲಿದೆ. ಪಾರ್ಕನಲ್ಲಿ 77 ಅಡಿಯ ಶ್ರೀ ರಾಮನ ಮೂರ್ತಿ ಸ್ಥಾಪನೆಯಾಗಲಿದೆ. ನವೆಂಬರ್ 20 ರವರೆಗೆ ಸಿದ್ಧತಾ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಸದ್ಯ ಗೋವಾದ ಕಾಣಕೋಣದಲ್ಲಿರುವ ಶ್ರೀ ಪರ್ತಗಾಳಿ ಮಠದ ಪರಿಸರದಲ್ಲಿ ಸಾವಿರಾರು ಜನ ಕಾರ್ಮಿಕರು ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇಂಜಿನೀಯರ್ ಅಭಯ ಕುಂಕಳಿಕರ್ ರವರ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಮಾಯಣ ಪಾರ್ಕ ಪ್ರಮುಖ ಆಕರ್ಷಣೆಯಾಗಲಿದ್ದು ಈ ಪಾರ್ಕಗಾಗಿ ಪ್ರತ್ಯೇಕ ಲ್ಯಾಂಡ್ ಸ್ಕೇಪಿಂಗ್ ಮಾಡಲಾಗುವುದು ಎಂಬ ಮಾಹಿತಿ ನೀಡಿದರು. ಶ್ರೀ ರಾಮಾಯಣ ಪಾರ್ಕನಲ್ಲಿ 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಸ್ಥಾಪಿಸಲಾಗುತ್ತಿದ್ದು ಈ ಮೂರ್ತಿಯ ನಿರ್ಮಾಣವನ್ನು ದೆಹಲಿಯ ಪ್ರಸಿದ್ಧ ಪದ್ಮಶ್ರೀ ರಾಮ ಸುತಾರ್ ರವರು ಕೈಗೊಳ್ಳುತ್ತಿದ್ದಾರೆ.
ರಾಮಾಯಣ ಪಾರ್ಕ ಪಕ್ಕದಲ್ಲಿಯೇ ಭವ್ಯ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು ನವೆಂಬರ್ 27 ರಿಂದ ಆರಂಭಗೊಳ್ಳಲಿರುವ ಸಾರ್ಥ ಪಂಚಶತಾಬ್ದಿ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 28 ರಂದು ಶ್ರೀಮಠಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಕೂಡ ನಡೆಯುತ್ತಿದೆ.
ಶ್ರೀಮಠದ ಪರಿಸರದಲ್ಲಿದ್ದ ಇಂದಿರಾಕಾಂತ ಭವನವನ್ನೂ ಜೀರ್ಣೋದ್ಧಾರ ಮಾಡಲಾಗಿದ್ದು ಮೂರು ಅಂತಸ್ಥಿನ ಭವನದಲ್ಲಿ 500 ರಿಂದ 600 ಜನರು ಕುಳಿತು ಶ್ರೀಗಳ ಪ್ರವಚನ ಕೇಳಲು ಹೆಚ್ಚಿನ ಅನುಕೂಲವಾಗಲಿದೆ. ಸುಮಾರು 2000 ಚೌ.ಮೀಟರ್ ಜಾಗದಲ್ಲಿ ಸಭಾಗೃಹವೊಂದನ್ನು ನಿರ್ಮಿಸಲಾಗುತ್ತಿದ್ದು ಇದರಲ್ಲಿ ರಾಮಾಯಣವನ್ನು ಆಧಾರಿತ ಸಂಗ್ರಹಾಲಯ ಹಾಗೂ 7 ತ್ರಿಡಿ ಥಿಯೇಟರ್ ನಿರ್ಮಿಸಲಾಗುತ್ತಿದೆ. ಈ ಥಿಯೇಟರ್ ನಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಚಿತ್ರ ಹಾಗೂ ಮಾಹಿತಿ ಚಿತ್ರವನ್ನು ಕೂಡ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
