ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಿರಾಮಾರ್‍ನಲ್ಲಿ ನಿಲ್ಲಿಸಿ ಹೋಗಿದ್ದ ಟ್ರಕ್‍ನಲ್ಲಿ ಭಾರತ್ ಪೆಟ್ರೋಲಿಯಂನ ಗ್ಯಾಸ್ ಸಿಲಿಂಡರ್‍ನಿಂದ ಇಬ್ಬರು ಅನಿಲವನ್ನು ಕದಿಯುತ್ತಿದ್ದಾಗ ಸ್ಥಳೀಯರು ಹಿಡಿದಿದ್ದಾರೆ. ಆದರೆ ನಂತರ ಎಲ್ಲಾ ವಸ್ತುಗಳನ್ನು ಬಿಟ್ಟು ಇಬ್ಬರೂ ಗ್ಯಾಸ್ ಕಳ್ಳರು ಪರಾರಿಯಾಗಿದ್ದಾರೆ.

ಹೋಟೆಲ್ ಗೆ ಪೂರೈಕೆ ಮಾಡಬೇಕಿದ್ದ ಸಿಲಿಂಡರ್ ನಿಂದ ಗ್ಯಾಸ್ ಕಳ್ಳತನ ಮಾಡಲಾಗುತ್ತಿತ್ತು. ಈ ಕುರಿತಂತೆ ಪೋಲೀಸರಿಗೆ ದೂರು ಬಂದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪ್ರತಿದಿನ ಮೀರಾಮಾರ್ ನಲ್ಲಿ ಒಂದೇ ಸ್ಥಳದಲ್ಲಿ ಸಿಲಿಂಡರ್ ತುಂಬಿದ್ದ ಟ್ರಕ್ ನ್ನು ನಿಲ್ಲಿಸಿ ಇಡಲಾಗುತ್ತಿತ್ತು. ಚಾಲಕ ಹಾಗೂ ಕ್ಲೀನರ್ ನನ್ನು ವಿಚಾರಿಸಿದಾಗ ಹೋಟೆಲ್ ಗೆ ಸಿಲಿಂಡರ್ ಡಿಲೆವರಿ ಮತ್ತು ಬಿಲ್ ನೀಡಲು ವಿಳಂಭವಾಗುತ್ತದೆ ಎಂಬ ಕಾರಣ ನೀಡುತ್ತಿದ್ದರು.

ಆದರೆ ಈ ಕುರಿತಂತೆ ಸಂಶಯದಿಂದ ವೀಡಿಯೊ ಚಿತ್ರೀಕರಣ ಮಾಡಿದಾಗ ತುಂಬಿದ ಸಿಲಿಂಡರ್ ನಿಂದ ಗ್ಯಾಸನ್ನು ಖಾಲಿ ಸಿಲಿಂಡರ್ ಗೆ ಅರ್ಧದಷ್ಟು ಪೈಪ್ ಮೂಲಕ ಖಾಲಿ ಸಿಲಿಂಡರ್ ಗೆ ತುಂಬಿಸಲಾಗುತ್ತಿತ್ತು. ನಂತರ ಅದೇ ರೀತಿ ಮೊದಲಿನಂತೆಯೇ ಸಿಲಿಂಡರ್ ಗೆ ಸೀಲ್ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರೋರ್ವರು ಪ್ರಶ್ನಿಸಿದಾಗ ಟ್ರಕ್ ಚಾಲಕ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ.

ಪೆÇಲೀಸರಿಗೆ ಕರೆ ಮಾಡಿದ ನಂತರ, ಪೂರ್ಣ ಸಿಲಿಂಡರ್ ಮತ್ತು ಅರ್ಧ ತುಂಬಿದ ಸಿಲಿಂಡರ್ ಮತ್ತು ಇತರ ಸಾಮಗ್ರಿಗಳನ್ನು ಹೊಂದಿರುವ ಟ್ರಕ್ ಬಿಟ್ಟು ಚಾಲಕ ಹಾಗೂ ಕ್ಲೀನರ್ ಇಬ್ಬರೂ ಪರಾರಿಯಾಗಿದ್ದಾರೆ. ಅನಿಲ ಕಳ್ಳತನಕ್ಕೆ ಬಳಸುವ ತಂತಿಯನ್ನು ಅಲ್ಲಿಯೇ ಇಡಲಾಗಿತ್ತು.
ಅನಿಲ ಸಿಲಿಂಡರ್ ಟ್ರಕ್ ನ್ನು ಮೂರು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಇಡಲಾಗುತ್ತದೆ, ಆದರೆ ಅನಿಲ ಸಂಸ್ಥೆ ಏಕೆ ಪ್ರಶ್ನಿಸುವುದಿಲ್ಲ? ಕಂಪನಿಯ ಸ್ಟಿಕ್ಕರ್ ಬಗ್ಗೆ ಏನು? ಮಾಪಕ ಖಾತೆ ಎಲ್ಲಿದೆ? ಇದಕ್ಕೆ ಯಾರು ಹೊಣೆ? ಇದರಲ್ಲಿ ಅನಿಲ ಸಂಸ್ಥೆಯ ಪಾತ್ರವೇನು? ಇಂತಹ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.