ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರಗೋವಾದ ಬೀಚ್ ನಲ್ಲಿ Goa Beech) ಇಬ್ಬರು ವಿದೇಶಿ ಮಹಿಳೆಯರಿಗೆ ತೊಂದರೆ ನೀಡುತ್ತಿದ್ದ ವೀಡಿಯೋವೊಂದು (Video)ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ಕಾರ್ಯಾಚರಣೆ ನಡೆಸಿದ ಗೋವಾ ಪೋಲಿಸರು ಕರ್ನಾಟಕದ ಮೈಸೂರಿನಿಂದ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ಸಾರೆ.

ಕಳೆ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ಗೋವಾ ಬೀಚ್ ನಲ್ಲಿ ಕೆಲ ದೇಶೀಯ ಪ್ರವಾಸಿಗರು ವಿದೇಶಿ  ಮಹಿಳೆಯರಿಗೆ ಪೊಟೊ ತೆಗೆಯಲು ಒತ್ತಡ ಹೇರುತ್ತಿದ್ದರು. ವಿದೇಶಿ ಮಹಿಳೆಯರ ಕೈ ಹಿಡಿದು ಪೊಟೊ ತೆಗೆದುಕೊಳ್ಳೋಣ ಎಂದು ಆಘ್ರಹ ಮಾಡುತ್ತಿದ್ದರು. ಮಹಿಳೆಯರು ಅಸ್ವಸ್ಥವಾಗಿರುವಂತೆ ಕಂಡುಬರುವ ಸಂದರ್ಭದಲ್ಲಿ ಅವರ ಬುಜದ ಮೇಲೆ ಕೈ ಹಾಕಿ ಪೊಟೊ ತೆಗೆಸಿಕೊಂಡಿದ್ದರು. ಈ ಘಟನೆಯಿಂದಾಗಿ ಗೋವಾದಲ್ಲಿ ಮಹಿಳಾ ಪ್ರವಾಸಿಗರ ಸುರಕ್ಷತೆಯ ಪ್ರಶ್ನೆ ನಿರ್ಮಾಣವಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೋವಾ ಪೋಲಿಸರು ಪ್ರವಾಸಿ ಪೋಲಿಸ್ ನಿರೀಕ್ಷಕರು ಗೋವಾ ರಾಜ್ಯದ ವತಿಯಿಂದ ಸ್ವತಃ ತಾವೇ ಪ್ರಕರಣ ದಾಖಲಿಸಿಕೊಂಡರು. ಇದರ ಅನುಸಾರ ನವೆಂಬರ್ 7 ರಂದು ಗೋವಾದ ಮಾಂದ್ರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತು. ಪೋಲಿಸರು ಕಾರ್ಯಾಚರಣೆ ನಡೆಸಿ ಕರ್ನಾಟಕದ ಮೈಸೂರು ಹಾಗೂ ಬೆಂಗಳೂರಿನಿಂದ ಕಾರ್ಕಿತ್ ಬಿ.ಆರ್ (28), ಬಿ.ಎನ್ ಸಂತೋಷ(33), ರವಿ .ಬಿ ಎನ್ ಎಂಬ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿ ಕರೆತರುವಲ್ಲಿ ಯಶಸ್ಸಿಯಾಗಿದ್ದಾರೆ.

ಉತ್ತರ ಗೋವಾ ಪೋಲಿಸ್ ಅಧೀಕ್ಷಕ ರಾಹುಲ್ ಗುಪ್ತಾ ಹಾಗೂ ಪೋಲಿಸ್ ಉಪ ಅಧೀಕ್ಷಕ ಸಲೀಮ್ ಶೇಖ್ ರವರ ಮಾರ್ಗದರ್ಶನದಲ್ಲಿ ಮಾಂದ್ರೇ ಪೋಲಿಸ್ ತಂಡದ ಪಿಎಸ್ ಐ ಪರೇಶ್ ಕಾಳೆ, ಪಿಎಸ್ ಐ ಅಭಿಷೇಕ್ ಚೋಡಣಕರ್, ಕಾನ್ ಸ್ಟೆಬಲ್ ಯೋಗೇಶ್ ಶೀಂದೆ, ರೋಹನ್ ಶಿವೋಲಕರ್, ಗಜಾನನ ಶೇಟಕರ್, ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.