ಸುದ್ಧಿಕನ್ನಡ ವಾರ್ತೆ
ಪಣಜಿ: ಕುಖ್ಯಾತ ಅಂಡರ್ ವಲ್ಡ ಡಾನ್ ದಾವುದ್ ಇಬ್ರಾಹಿಂ ಈತನ ಹತ್ತಿರದ ವ್ಯಕ್ತಿ ದನೀಶ್ ಮರ್ಚಂಟ್ ಎಂಬ ವ್ಯಕ್ತಿಯನ್ನು ಮುಂಬಯಿ ಪೋಲಿಸರು ಗೋವಾದಲ್ಲಿ ಬಂಧಿಸಿದ್ದಾರೆ. ಮುಂಬಯಿ ಪೋಲಿಸರ ಮಾದಕ ಪದಾರ್ಥ ನಿಗ್ರಹ ದಳ (ಎನ್ ಸಿ ಬಿ) ಪೋಲಿಸರು ಗೋವಾದ ಹಣಜುಣದಲ್ಲಿ ಈತನನ್ನು ಬಂಧಿಸಿದ್ದಾರೆ.
ದನೀಶ್ ಮರ್ಚಂಟ್ ಈತನನ್ನು ದನಿಶ್ ಚಿಕನಾ ಎಂದು ಕೂಡ ಕರೆಯಲಾಗುತ್ತದೆ. ದನೀಶ್ ಈತ ದಾವುದ್ ಇಬ್ರಾಹಿಂ ಈತನ ಅತಿ ಹತ್ತಿರದ ವ್ಯಕ್ತಿ ಎನ್ನಲಾಗಿದ್ದು ಈತ ಮುಂಬಯಿಯ ಡೋಂಗರಿ ಭಾಗದಲ್ಲಿ ಇದ್ದು ಮಾದಕ ವಸ್ತು ವ್ಯಾಪಾರನ್ನು ನೋಡಿಕೊಳ್ಳುತ್ತಿದ್ದ. ಇಂತಹದ್ದೇ ಪ್ರಕರಣದಲ್ಲಿ ದನೀಶ್ ನನ್ನು ಮುಂಬಯಿ ಪೋಲಿಸರು ಕಳೆದ ವರ್ಷ ಕೂಡ ಬಂಧಿಸಿದ್ದರು.
ಅಂದು ಮುಂಬಯಿ ಪೋಲಿಸರು ಕೋಟ್ಯಂತರ ರೂ ಮಾದಕ ವಸ್ತುಗಳನ್ನು ಕೂಡ ವಷಪಡಿಸಿಕೊಂಡಿದ್ದರು.
ದನೀಶ್ ವಿರುದ್ಧ ಮಾದಕ ಪದಾರ್ಥ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕಾರ್ಯಾಚರಣೆ ಕೂಡ ಕೈಗೊಳ್ಳಲಾಗಿತ್ತು. 2021 ರಲ್ಲಿ ದನೀಶ್ ನನ್ನು ಬಂಧಿಸಿ ಈತನಿಂದ 200 ಗ್ರಾಂ ಮಾದಕ ವಸ್ತು ವಷಪಡಿಸಿಕೊಂಡಿದ್ದರು. ಇದೀಗ ಮುಂಬಯಿ ಪೋಲಿಸರು ಗೋವಾದಲ್ಲಿ ದಾವುದ್ ಇಬ್ರಾಹಿಂ ನ ಹತ್ತಿರದ ವ್ಯಕ್ತಿ ದನೀಶ್ ನನ್ನು ಬಂಧಿಸಿದ್ದಾರೆ.
