ಸುದ್ಧಿಕನ್ನಡ ವಾರ್ತೆ
ಪಣಜಿ: ರಸ್ತೆಯ ಅಂದಾಜಿಲ್ಲದೆಯೇ ಗೂಗಲ್ ಮ್ಯಾಪ್ ನೋಡಿಕೊಂಡು ತೆರಳುತ್ತಿದ್ದ ಪ್ರವಾಸಿಗ ತನ್ನ ಜೀಪ್ಸಿ ಕಾರನ್ನು ತೆಗೆದುಕೊಂಡು ನದಿಗೆ ಹಾರಿದ ಘಟನೆ ಗೋವಾದಲ್ಲಿ ನಡೆದಿದೆ.
ಚಂದೀಗಡದಿಂದ ಗೋವಾ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗ ಅಮನದೀಪ ಸಿಂಗ್ ರವರು ಜಿಎ-08,ಆರ್-2154 ಕ್ರಮಾಂಕದ ಜೀಪ್ಸಿ ಗಾಡಿ ಚಲಿಸಿಕೊಂಡು ಮಾಪ್ಸಾ ಮಯಡೆ ಮಾರ್ಗವಾಗಿ ತೆರಳುತ್ತಿದ್ದ. ಮಾರ್ಗದ ಪರಿಚಯವಿಲ್ಲದೆಯೇ ಗೂಗಲ್ ಮ್ಯಾಪ್ ನೋಡಿಕೊಂಡು ತೆರಳುತ್ತಿರುವಾಗ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದಾಗ ಫೇರಿ ಬಾರ್ಜ ನಿಲ್ಲಿಸುವ ದಾರಿಯಿಂದ ನೇರವಾಗಿ ನದಿಗೆ ಹಾರಿದ್ದಾರೆ. ನಂತರ ಕೂಡಲೆ ಗಾಡಿಯಿಂದ ಹೊರ ಬಂದು ದಡ ಸೇರಿಕೊಂಡಿದ್ದಾರೆ.
ಈ ಘಟನೆ ಭಾನುವಾರ ಮಧ್ಯರಾತ್ರಿಯ ವೇಳೆಗೆ ನಡೆದಿದೆ. ನಂತರ ಈ ಘಟನೆಯ ಮಾಹಿತಿಯನ್ನು ಸೋಮವಾರ ಮಾಪ್ಸಾ ಪೋಲಿಸರಿಗೆ ನೀಡಲಾಯಿತು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದಿಂದ ಜಿಪ್ಸಿ ಗಾಡಿಯನ್ನು ನದಿಯಿಂದ ಹೊರತೆಗೆಯಲಾಗಿದೆ.
